ಕೂಗು ನಿಮ್ಮದು ಧ್ವನಿ ನಮ್ಮದು

ಕ್ಷೇತ್ರದ ಹಿತಕ್ಕಾಗಿ ಬಿಜೆಪಿಯನ್ನ ಆಯ್ಕೆ ಮಾಡಿ: ಕೇಂದ್ರ ಸಚಿವೆ ಅನ್ನಪೂರ್ಣಾದೇವಿ

ನಿಪ್ಪಾಣಿ: ಡಬಲ್‌ ಇಂಜಿನ್‌ ಸರಕಾರದ ಮುತುವರ್ಜಿಯಿಂದ ರಾಜ್ಯದಲ್ಲಿ ಹಿಂದೆಂದೂ ಕಾಣದ ಅಭಿವೃದ್ದಿ ಕಾರ್ಯಗಳನ್ನು ಮಾಡಲಾಗಿದೆ. ರಾಜ್ಯದಲ್ಲಿ ಹಾಗೂ ನಿಪ್ಪಾಣಿ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ದಿಯನ್ನು ಕಾಣಲು ಬಿಜೆಪಿಗೆ ಬೆಂಬಲಿಸಿ ಎಂದು ಕೇಂದ್ರ ಶಿಕ್ಷಣ ಇಲಾಖೆಯ ರಾಜ್ಯ ಖಾತೆ ಸಚಿವೆ ಅನ್ನಪೂರ್ಣಾದೇವಿ ಕರೆ ನೀಡಿದರು.

ಇಂದು ನಿಪ್ಪಾಣೀ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಸಚಿವೆ ಶಶಿಕಲಾ ಅ ಜೊಲ್ಲೆ ಅವರ ಪರವಾಗಿ ನಿಪ್ಪಾಣಿ ನಗರದ 28 ಮತ್ತು 30 ವಾರ್ಡ್ ಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡು ಮಾತನಾಡಿದರು. ಕ್ಷೇತ್ರದಲ್ಲಿ ಕಳೆದ 10 ವರ್ಷಗಳಿಂದ ಶಶಿಕಲಾ ಅ ಜೊಲ್ಲೆ ಅವರ ಮುಂದಾಳತ್ವದಲ್ಲಿ ಅಭೂತಪೂರ್ವ ಅಭಿವೃದ್ದಿಯನ್ನು ಕೈಗೊಳ್ಳಾಗಿದೆ. ಸುಮಾರು 2 ಸಾವಿರಗಳಷ್ಟು ಅಭಿವೃದ್ದಿ ಕಾರ್ಯಗಳನ್ನ ಕೈಗೊಳ್ಳುವುದು ಸುಲಭದ ಮಾತಲ್ಲ. ಬಿಜೆಪಿ ಸರಕಾರಗಳು ಯಾವಾಗಲೂ ಅಭಿವೃದ್ದಿ ಪರವಾಗಿಯೇ ಚಿಂತನೆ ನಡೆಸುತ್ತವೆ. ಅಭಿವೃದ್ದಿ ಪರ ರಾಜಕಾರಣಕ್ಕೆ ಜನರು ಒಲವು ತೋರುತ್ತಿದ್ದಾರೆ. ಕ್ಷೇತ್ರದಲ್ಲಿ ಇನ್ನಷ್ಟ ಅಭಿವೃದ್ದಿಗಾಗಿ ಬಿಜೆಪಿ ಅಭ್ಯರ್ಥಿ ಶಶಿಕಲಾ ಜೊಲ್ಲೆ ಅವರನ್ನು ಬೆಂಬಲಿಸಿ ಆಶೀರ್ವದಿಸಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಜಯವಂತ ಭಾಟಲೆ, ಉಪಾಧ್ಯಕ್ಷರಾದ ನೀತಾ ಬಾಗಡಿ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶಾಂಭವಿ ಅಶ್ವತಪುರ, ನಿಪ್ಪಾಣಿ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ವಿಭಾವರಿ ಖಾಂಡಕೆ, ನಗರ ಅಧ್ಯಕ್ಷರಾದ ಪ್ರಣವ ಮನವಿ, ನಗರಸಭೆ ಸದಸ್ಯರು ಉಪಸ್ಥಿತರಿದ್ದರು.

error: Content is protected !!