ಚಾಕೊಲೇಟ್‍ನಲ್ಲಿ ಮಾಡುವ ಯಾವುದೇ ರೀತಿಯ ತಿಂಡಿ ಮತ್ತು ಪಾನೀಯಾಗಳನ್ನು ಎಲ್ಲ ವಯಸ್ಸಿನವರು ಚಪ್ಪರಿಸಿಕೊಂಡು ಸವಿಯುತ್ತಾರೆ. ಅದರಲ್ಲಿ ಲಸ್ಸಿ ಎಂದರೂ ಎಲ್ಲರಿಗೂ ಇಷ್ಟ. ಚಾಕೊಲೇಟ್ ಮತ್ತು ಲಸ್ಸಿ ಎಂದು ಮಿಕ್ಸ್ ಮಾಡಿ ಒಂದು ರೆಸಿಪಿ ಮಾಡಿದ್ರೆ ಹೇಗಿರುತ್ತೆ ಯೋಚಿಸಿ. ಈ ರೆಸಿಪಿಯನ್ನು ಸರಳವಾಗಿ ನಿಮ್ಮ ಮನೆಯಲ್ಲಿ ಟ್ರೈ ಮಾಡಿ.
ಬೇಕಾಗಿರುವ ಸಾಮಾಗ್ರಿಗಳು:
1) ಮೊಸರು – 4 ಕಪ್
2) ಚಾಕೊಲೇಟ್ – 10
3) ಸಕ್ಕರೆ – 3/4 ಕಪ್
4) ಚಾಕೊಲೇಟ್ ಸಿರಪ್ – 4 ಟೇಬಲ್‍ಸ್ಪೂನ್
5) ಡಾರ್ಕ್ ಚಾಕೊಲೇಟ್ ಬಿಸ್ಕತ್ತುಗಳನ್ನು ಅಲಂಕರಿಸಲು ಪುಡಿಮಾಡಿಕೊಳ್ಳಿ.
ಮಾಡುವ ವಿಧಾನ:
ಮಿಕ್ಸರ್ ಜಾರ್‌ನಲ್ಲಿ ಮೊಸರನ್ನು ಹಾಕಿ. ಅದಕ್ಕೆ ಚಾಕೊಲೇಟ್, ಸಕ್ಕರೆ ಸೇರಿಸಿ ರುಬ್ಬಿಕೊಳ್ಳಿ. ಇಂದು ಖಾಲಿ ಗ್ಲಾಸ್‍ಗೆ 1 ಟೀಸ್ಪೂನ್ ಡಾರ್ಕ್ ಚಾಕೊಲೇಟ್ ಸಿರಪ್ ಅನ್ನು ಹರಡಿ. ನಂತರ ಅದಕ್ಕೆ ರುಬ್ಬಿದ ಚಾಕೊಲೇಟ್ ಮಿಶ್ರಣವನ್ನು ಹಾಕಿ. ನಂತರ ಚಾಕೊಲೇಟ್ ಲಸ್ಸಿ ಮೇಲೆ ಪುಡಿಮಾಡಿದ ಡಾರ್ಕ್ ಚಾಕೊಲೇಟ್ ಬಿಸ್ಕತ್ತುಗಳು ಮತ್ತು ಕೆಲವು ಪುಡಿಮಾಡಿದ ಚಾಕೊಲೇಟ್‍ಗಳನ್ನು ಅಲಂಕರಿಸಿ. ತಣ್ಣಗಾದ ನಂತರ ಬಡಿಸಿ.