ಲಡಾಕ್: ಭಾರತವನ್ನು ಚೀನಾ ಸೈನಿಕರು ಮತ್ತೆ ಕೆಣಕಿದ್ದಾರೆ. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ ಒಂದು ನೂರು ಸೈನಿಕರು ಕುದುರೆ ಮೂಲಕ ಭಾರತದ ಉತ್ತರಾಖಂಡದ ಬಾರಹೋಟಿಗೆ ಪ್ರವೇಶಿಸಿ ಸುಮಾರು ಮೂರು ಗಂಟೆಗಳ ಕಾಲ ತಂಗಿದ್ದ ವಿಚಾರವು ತಡವಾಗಿ ಬೆಳಕಿಗೆ ಬಂದಿದ್ದು, ಭಾರತೀಯ ರಕ್ಷಣಾ ಪಡೆಯ ಸೈನಿಕರು ಇಲ್ಲದೇ ಇರುವಂತಹ ಸಮಯದಲ್ಲಿ ಗಡಿ ಪ್ರವೇಶ ಮಾಡಿ ಚೀನಾ ಸೇನೆಯು ಕಾಲು ಸೇತುವೆಯನ್ನು ನಾಶ ಮಾಡಿದೆ.
ನಂತರ ಅದೇ ವೇಳೆ ITBP ಪಡೆ ಬಂದಾಗ, ಪೀಪಲ್ಸ್ ಲಿಬರೇಶನ್ ಆರ್ಮಿಯ ಸೈನಿಕರು ಆ ಜಾಗದಿಂದ ಕಾಲ್ಕಿತ್ತಿದ್ದಾರೆ ಎಂದು ಮೂಲಗಳಿಂದ ತಳಿದು ಬಂದಿದೆ. ಆಧಾರಿಸಿ ಮಾಧ್ಯಮ ವರದಿ ಮಾಡಿದೆ. ಈ ವಿಚಾರವಾಗಿ ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಪ್ರತಿಕ್ರಿಯಿಸಿ, ಸರ್ಕಾರಕ್ಕೆ ಈ ರೀತಿಯ ಘಟನೆ ನಡೆದಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಪೂರ್ವ ಲಡಾಕ್‍ನಲ್ಲಿ ಕಿರಿಕ್ ಮಾಡಿದ್ದ ಚೀನಿ ಸೈನಿಕರಿಗೆ ಭಾರತ ಸರಿಯಾಗಿ ತಿರುಗೇಟು ನೀಡಿತ್ತು. ಈ ಘಟನೆಯ ನಂತರ ೨ ದೇಶಗಳು ಗಡಿಗಳಲ್ಲಿ ಭಾರೀ ಸಂಖ್ಯೆಯಲ್ಲಿ ಸೈನಿಕರನ್ನು ನಿಯೋಜಿಸಿತ್ತು. ಕೆಲವು ಸುತ್ತಿನ ಮಾತುಕತೆಯ ನಂತರ ೨ ದೇಶಗಳು ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡಿದ್ದವು. ಈ ವಿಚಾರ ತಣ್ಣಗಾಗುವ ಸಮಯದಲ್ಲೇ ಮತ್ತೆ ಚೀನಾ ಕಿರಿಕ್ ತೆಗೆದಿದೆ.