ಇಂದು ಮಕ್ಕಳ ದಿನಾಚರಣೆ. ಐಎಫ್ಎಸ್ ಅಧಿಕಾರಿ ಸುಸಾಂತ ನಂದಾ ಟ್ವಿಟರ್ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ ಐದು ಬಾತುಕೋಳಿ ಮರಿಗಳನ್ನು ಕೋತಿಯೊಂದು ತನ್ನ ಮಕ್ಕಳಂತೆಯೇ ಕಾಣುತ್ತಿದೆ. ಎಳೆಹುಲ್ಲಿನ ಮೇಲೆ ಆಟವಾಡುತ್ತ, ನೆಗೆದಾಡುತ್ತ, ಆರಾಮ ತೆಗೆದುಕೊಳ್ಳುತ್ತ ಒಂದಕ್ಕೊಂದು ಎಷ್ಟೊಂದು ಅನ್ಯೋನ್ಯವಾಗಿ ಉಲ್ಲಾಸಮಯವಾಗಿವೆಯಲ್ಲ? ನೋಡಿ ಈ ವಿಡಿಯೋ
23 ಸೆಕೆಂಡಿನ ಈ ವಿಡಿಯೋ ನಿಮ್ಮನ್ನು ಮುದಗೊಳಿಸದೇ ಇರಲಾರದು. ಈ ತನಕ ಈ ವಿಡಿಯೋ ಅನ್ನು 27,000ಕ್ಕಿಂತಲೂ ಹೆಚ್ಚು ಜನರು ನೋಡಿದ್ದಾರೆ. 1,700ಕ್ಕಿಂತಲೂ ಹೆಚ್ಚು ಜನ ಇದನ್ನು ಇಷ್ಟಪಟ್ಟಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಎಂಥ ಅದ್ಭುತವಾದ ದೃಶ್ಯವಿದು. ಇದನ್ನು ಹಂಚಿಕೊಂಡ ನಿಮಗೆ ಧನ್ಯವಾದ ಎಂದಿದ್ದಾರೆ. ಇಂಥ ಮುಗ್ಧ ಜೀವಗಳನ್ನು ಪ್ರಕೃತಿ ಪೊರೆಯಲಿ ಎಂದಿದ್ದಾರ ಎನ್ನೊಬ್ಬರು. ಈ ವಿಡಿಯೋ ಒಂದು ಥೆರಪಿಯಂತೆ ಭಾಸವಾಗುತ್ತಿದೆ. ನೋಡುತ್ತಿದ್ದಂತೆ ಎಂಥ ಆಹ್ಲಾದಕರ ಅನುಭವವಾಗುತ್ತಿದೆ. ಇದನ್ನು ವಿಡಿಯೋ ಮಾಡಿದವರಿಗೆ ಧನ್ಯವಾದ ಎಂದಿದ್ದಾರೆ ಮಗದೊಬ್ಬರು.