ಕೂಗು ನಿಮ್ಮದು ಧ್ವನಿ ನಮ್ಮದು

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ 7 ಮಂದಿ ಕಿರಾತಕರಿಂದ ಕೃತ್ಯ

ಚಿಕ್ಕಬಳ್ಳಾಪುರ: 7 ಮಂದಿ ಯುವಕರು ನಿರಂತರ ಅತ್ಯಾಚಾರಗೈದ ಪರಿಣಾಮ 14 ವರ್ಷದ 8ನೇ ತರಗತಿ ವಿದ್ಯಾರ್ಥಿನಿಯೊರ್ವಳು 4 ತಿಂಗಳ ಗರ್ಭಿಣಿ ಆಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೊರೊನಾದಿಂದಾಗಿ ಶಾಲೆಗೆ ರಜೆ ಇದ್ದ ಕಾರಣ ಮನೆಯಲ್ಲೇ ಇರುತ್ತಿದ್ದ ಬಾಲಕಿ ಮೇಲೆ ಅದೇ ಗ್ರಾಮದ 7 ಮಂದಿ ಯುವಕರು ನಿರಂತರವಾಗಿ ಅತ್ಯಾಚಾರ ನಡೆಸಿದ್ದಾರೆ. ಪರಿಣಾಮ ಅಪ್ರಾಪ್ತ ಬಾಲಕಿ ಆರೋಗ್ಯ ದ ಮೇಲೆ ಪ್ರಭಾವ ಆಗಿ ಆಸ್ಪತ್ರೆಗೆ ಹೋದಾಗ ಬಾಲಕಿ 4 ತಿಂಗಳ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಬಾಲಕಿ ಹೇಳಿಕೆ ಮೇರೆಗೆ 7 ಮಂದಿ ವಿರುದ್ದ ದೂರು ದಾಖಲಿಸಲಾಗಿದೆ. ಸದ್ಯ 3 ಮಂದಿಯನ್ನು ಪೊಲೀಸರು ಬಂಧಿಸಿದ್ದು ಉಳಿದ ನಾಲ್ವರಿಗಾಗಿ ಹುಡುಕಾಟ ನಡೆಸಿದ್ದಾರೆ. ಬಾಲಕಿ ಸದ್ಯ ಪೊಲೀಸರ ವಶದಲ್ಲಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

error: Content is protected !!