ಕೂಗು ನಿಮ್ಮದು ಧ್ವನಿ ನಮ್ಮದು

ಕಳಚಿತು ಸಾಹಿತ್ಯದ ಮತ್ತೊಂದು ಕೊಂಡಿ: ನಾಡೋಜ ಚನ್ನವೀರ ಕಣವಿ ಅಸ್ತಂಗತ

ಧಾರವಾಡ: ಕನ್ನಡದ ಜನಪ್ರಿಯ ಹಿರಿಯ ಕವಿಯಾದ ನಾಡೋಜ ಡಾ. ಚನ್ನವೀರ ಕಣವಿ (93) ನಿಧನರಾಗಿದ್ದಾರೆ. ಕೋರೊನಾ ಸೋಂಕಿಗೆ ತುತ್ತಾಗಿದ್ದ ಚೆನ್ನವೀರ ಕಣವಿ ಅವರನ್ನು ಜನೇವರಿ ಹದಿನಾಲ್ಕರಂದು ಧಾರವಾಡದ SDM ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಇವತ್ತು ಚಿಕಿತ್ಸೆ ಫಲಕಾರಿಯಾಗದೇ ಕಣವಿಯವರು ಮೃತಪಟ್ಟಿದ್ದಾರೆ. ಜೂನ್ 28,1928ರಂದು ಧಾರವಾಡ ಜಿಲ್ಲೆಯ ಹೊಂಬಳದಲ್ಲಿ ಜನಿಸಿದ್ದ ಚನ್ನವೀರ ಕಣವಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ BA ಹಾಗೂ MA ಪದವಿ ಪಡೆದ್ರು.

ಕರ್ನಾಟಕ ವಿಶ್ವವಿದ್ಯಾಲಯ ವ್ಯಾಸಂಗ ಪ್ರಸರಣ ಮತ್ತು ಪ್ರಕಟಣಾ ವಿಭಾಗದ ಕಾರ್ಯದರ್ಶಿಯಾಗಿ, ಪ್ರಸಾರಾಂಗದ ನಿರ್ದೇಶಕರಾಗಿ ಡಾ.ಚನ್ನವೀರ ಕಣವಿಯವರು ಸೇವೆ ಸಲ್ಲಿಸಿದ್ರು. ಡಾ. ಚನ್ನವೀರ ಕಣವಿ ಅವರ ಮೊದಲ ಕವನ ಸಂಕಲನ ಕಾವ್ಯಾಕ್ಷಿ 1949ರಲ್ಲಿ ಬಿಡುಗಡೆಯಾಗಿತ್ತು. ಭಾವಜೀವಿ, ಆಕಾಶಬುಟ್ಟಿ, ಮಣ್ಣಿನ ಮೆರವಣಿಗೆ, ನೆಲಮುಗಿಲು, ಜೀವಧ್ವನಿ ಮುಂತಾದ ಹಲವು ಕವನ ಸಂಕಲನಗಳನ್ನು ಕಣವಿ ಅವರು ರಚಿಸಿದ್ದಾರೆ.

error: Content is protected !!