ಕೂಗು ನಿಮ್ಮದು ಧ್ವನಿ ನಮ್ಮದು

ಕೊಪ್ಪಳ: ಚುನಾವಣೆ ಮುನ್ನವೇ ‘ಖಾಕಿ’ ಕಾವಲು; ಜಿಲ್ಲೆಯಲ್ಲಿ ಹದಿನಾಲ್ಕು ಕಡೆ ಚೆಕ್ ಪೋಸ್ಟ್

ಕೊಪ್ಪಳ: ವಿಧಾನಸಭೆ ಚುನಾವಣೆಗೆ ಯಾವುದೇ ಸಮಯದಲ್ಲಾದರೂ ನೀತಿ ಸಂಹಿತೆ ಜಾರಿಯಾಗಿ ದಿನಾಂಕ ನಿಗದಿಯಾಗುವ ಸಾಧ್ಯತೆಯಿರುವುದರಿಂದ ಪೊಲೀಸ್‌ ಇಲಾಖೆ ಜಿಲ್ಲಾದ್ಯಂತ ಚುನಾವಣಾ ಅಕ್ರಮ ತಡೆಗೆ ಹದ್ದಿನ ಕಣ್ಣಿರಿಸಿದೆ. ಜಿಲ್ಲೆಯ ನಾನಾ ಕಡೆ 14 ಚೆಕ್‌ ಪೋಸ್ಟ್‌ಗಳನ್ನು ಹಾಕಲಾಗುತ್ತಿದ್ದು, ಬಿಗಿ ಪೊಲೀಸ್‌ ಬಂದೋಬಸ್‌್ತ ಒದಗಿಸಲಾಗುತ್ತಿದೆ. ಜಿಲ್ಲೆಯು ಕೊಪ್ಪಳ, ಗಂಗಾವತಿ, ಕುಷ್ಟಗಿ, ಗಂಗಾವತಿ-ಸಾಮಾನ್ಯ, ಕನಕಗಿರಿ-ಎಸ್ಸಿ ಮೀಸಲು ವಿಧಾನಸಭಾ ಕ್ಷೇತ್ರ ಹೊಂದಿದೆ.


ಕಳೆದ ಬಾರಿಗಿಂತ ಈ ಬಾರಿ ಐದು ವಿಧಾನಸಭಾ ಕ್ಷೇತ್ರಗಳಲ್ಲಿಹಣದ ಹೊಳೆ ಹೆಚ್ಚಿನ ಮಟ್ಟದಲ್ಲಿ ಹರಿಯುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ಹೆಚ್ಚಿನ ನಿಗಾ ಇರಿಸಿದ್ದಾರೆ. ಕೋಲಾರಕ್ಕೂ ಹೋಗಲ್ಲ, ಕುಷ್ಟಗಿಗೆ ಬರಲ್ಲ, ಹಾಗಾದ್ರೆ ಸಿದ್ದರಾಮಯ್ಯ ಚಿತ್ತ ಎತ್ತ?
ಚೆಕ್‌ ಪೋಸ್ಟ್‌ಗಳು ಕಾರ್ಯಾರಂಭ ಪೊಲೀಸ್‌ ಇಲಾಖೆ ಬೆಂಗಾವಲಾಗಿ ಚುನಾವಣೆ ಮುನ್ನವೇ ಕೆಲಸ ಪ್ರಾರಂಭಿಸಿದೆ. ಪೂರ್ವಭಾವಿಯಾಗಿ ಮುನಿರಾಬಾದ್‌ ಚೆಕ್‌ಪೋಸ್ಟ್‌ ಬಳಿ ಲಕ್ಷಾಂತರ ರೂ.ನಗದು, ಸೀರೆ ಸೇರಿ ವಿವಿಧ ಸಾಮಗ್ರಿ ವಶಪಡಿಸಿಕೊಂಡಿದೆ.


ಕೊಪ್ಪಳ ಜಿಲ್ಲೆವಿಜಯನಗರ, ಬಳ್ಳಾರಿ, ರಾಯಚೂರು, ಗದಗ, ಬಾಗಲಕೋಟೆ ಜಿಲ್ಲೆಗಳನ್ನು ಸುತ್ತುವರಿದಿದೆ. ಐದು ಜಿಲ್ಲೆಗಳ ಗಡಿ ಭಾಗದಿಂದ ಜಿಲ್ಲೆಯೊಳಗೆ ಅಕ್ರಮವಾಗಿ ಸಾಗಣೆಯಾಗುವ ಹಣ, ಮದ್ಯ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ತಡೆಯುವ ಉದ್ದೇಶದಿಂದ ಕೊಪ್ಪಳ ವಿಧಾನಸಭಾ ಕ್ಷೇತ್ರ-02, ಗಂಗಾವತಿ-01, ಕುಷ್ಟಗಿ-02, ಯಲಬುರ್ಗಾ-01, ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ01ಚೆಕ್‌ ಪೋಸ್ಟ್‌ಗಳು ಕಾರ್ಯಾರಂಭ ಮಾಡುತ್ತಿವೆ. ಇನ್ನುಳಿದ 7ಚೆಕ್‌ ಪೋಸ್ಟ್‌ಗಳು ಹಂತ-ಹಂತವಾಗಿ ಕಾರ್ಯಾರಂಭ ಮಾಡಲಿವೆ. ಎಲ್ಲಚೆಕ್‌ ಪೋಸ್ಟ್‌ಗಳ ಬಳಿ ಮೂಲ ಸೌಕರ್ಯ, ಸಿಸಿ ಕ್ಯಾಮೆರಾ ಅಳವಡಿಕೆ ಕಾರ್ಯ ನಡೆಯುತ್ತಿದೆ.

ಮತದಾರರ ಸೆಳೆಯಲು ಪ್ರಯತ್ನ:
ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಮೊದಲ ಹಂತದ ಭಾಗವಾಗಿ ಮತದಾರರನ್ನು ಸೆಳೆಯಲು ಚುನಾವಣಾ ಆಕಾಂಕ್ಷಿಗಳು ತೆರೆಮರೆಯಲ್ಲಿಪ್ರಯತ್ನಿಸುತ್ತಿದ್ದಾರೆ.ಈಚೆಗೆ ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿಮನೆ-ಮನೆಗೆ ಸೀರೆಗಳನ್ನು ಹಂಚಿ ಸಚಿವ ಹಾಲಪ್ಪ ಆಚಾರ್‌ ಟೀಕೆಗೆ ಗುರಿಯಾಗಿದ್ದರು. ಈ ಕುರಿತಂತೆ ಚುನಾವಣಾ ಆಯೋಗದ ನಿರ್ದೇಶಾನುಸಾರ ಕೊನೆಗೆ ಬೇವೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಇದೇ ರೀತಿ ಉಳಿದ ನಾಲ್ಕು ಕ್ಷೇತ್ರಗಳಲ್ಲಿಒಳಗೊಳಗೆ ಮತದಾರರನ್ನು ಸೆಳೆಯಲು ನಾನಾ ತಂತ್ರಗಳನ್ನು ರೂಪಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲವಾದರೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ.

ಮತಬೇಟೆ ಜೋರು:
ಈಗಾಗಲೇ ಕುಷ್ಟಗಿ, ಕೊಪ್ಪಳದಲ್ಲಿ ಎರಡು ಪಕ್ಷಗಳಿಂದ ಒಂದು ಹಂತದಲ್ಲಿಅಬ್ಬರದ ಪ್ರಚಾರ ಮುಗಿದಿದೆ. ಗಂಗಾವತಿ, ಕನಕಗಿರಿ, ಯಲಬುರ್ಗಾದಲ್ಲಿಯೂ ರಾಜಕೀಯ ನಾಯಕರ ಮತ ಬೇಟೆ ಜೋರಾಗಿದ್ದು, ದಿನಾಂಕ ಘೋಷಣೆಗೆ ಎದುರು ನೋಡುತ್ತಿದ್ದಾರೆ.ಜಿಲ್ಲೆಯಲ್ಲಿಬಿಜೆಪಿ-ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆಯಿದ್ದು, ಜೆಡಿಎಸ್‌, ಕೆಆರ್‌ಪಿಪಿ, ಆಮ್‌ ಆದ್ಮಿ ಏನಾದರೂ ಕಮಲ್‌ ಮಾಡಲಿದೆಯಾ ಎಂಬ ಕುತೂಹಲವೂ ಇದೆ.

ಯಾರು ಏನಂತಾರೆ?
ವಿಧಾನಸಭಾ ಚುನಾವಣೆಗೆ ಬಿಗಿ ಪೊಲೀಸ್‌ ಬಂದೋಬಸ್‌್ತ ಮಾಡಲಾಗುತ್ತಿದೆ. ಜಿಲ್ಲೆಯ ನಾನಾ ಕಡೆ ಚೆಕ್‌ಪೋಸ್ಟ್‌ಗಳನ್ನು ಹಾಕಲಾಗುತ್ತಿದ್ದು, ಅಕ್ರಮವಾಗಿ ಹಣ, ಮದ್ಯ ಸಾಗಣೆಗೆ ಕಡಿವಾಣ ಹಾಕಲಾಗುವುದು.

error: Content is protected !!