ಬೆಳಗಾವಿ: ಹಿರೇಬಾಗೇವಾಡಿ ಗ್ರಾಮದಲ್ಲಿ ಹದಿನೆಂಟು ವರ್ಷದ ಮೇಲ್ಪಟ್ಟ ವಯಸ್ಸಿನವರಿಗೆ ಕೋವಿಡ್ ಲಸಿಕೆಗಳ ( ವ್ಯಾಕ್ಸಿನೇಷನ್ ) ಚಾಲನೆಯ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಚನ್ನರಾಜ ಹಟ್ಟಿಹೊಳ್ಳಿ ಭಾಗವಹಿಸಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು ಈ ಕೋವಿಡ್ ಸಮಯದಲ್ಲಿ ಸೋಂಕಿನಿಂದ ತಕ್ಕಮಟ್ಟಿಗೆ ತಪ್ಪಿಸಿಕೊಳ್ಳಲು ಇರುವ ಮಾರ್ಗವೆಂದರೆ ಅದುವೇ ಲಸಿಕೆ, ಈ ಕೋವಿಡ್ ಲಸಿಕೆ ಇವತ್ತಿನ ಸಮಯದಲ್ಲಿ ಸಂಜೀವಿನಿಯಾಗಿದ್ದು, ದೇಹದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಲು ಸಹಕಾರಿಯಾಗಲಿದೆ, ಆದಕಾರಣ ಎಲ್ಲರು ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಲಸಿಕೆಗಳಿಗೆ ಒಳಗಾಗಿ, ಸೋಂಕಿನಿಂದ ದೂರವಿರಬೇಕು, ಲಸಿಕೆ ತೆಗೆದುಕೊಂಡು ನಂತರ ಯಾವುದನ್ನು ನಿರ್ಲಕ್ಷ್ಯ ಮಾಡದೆ ಸಾಮಾಜಿಕ ಅಂತರ, ಮಾಸ್ಕ್ ಸ್ಯಾನಿಟೈಸರ್ ಗಳ ಉಪಯೋಗವನ್ನು ಮಾಡುವುದರೊಂದಿಗೆ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾವಹಿಸಿರಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ದರ್ಗಾ ಅಜ್ಜನವರಾದ ಅಶ್ರಫ್ ಖಾದ್ರಿ, ಸಿ ಸಿ ಪಾಟೀಲ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸ್ವಾತಿ ಇಟಗಿ, ಉಪಾಧ್ಯಕ್ಷರಾದ ನಾಜರಿನ್ ಕರಿದಾವಲ್, ಗೌರವ್ವ ಪಾಟೀಲ, ಶಮೀನಾ ನದಾಪ್, ಸುರೇಶ ಇಟಗಿ, ಬಿ ಜಿ ವಾಲೀಟಗಿ, ಶ್ರೀಕಾಂತ ಮಾಧುಬರಮಣ್ಣವರ, ಆನಂದ ಪಾಟೀಲ, ಗೌಸ್ ಜಾಲಿಕೊಪ್ಪ, ಗೌಡಪ್ಪ ಜೀರಲಿ, ಸೈಯದ್ ಸನದಿ, ಯಾಕುಬ್ ದೇವಲಾಪೂರ, ಸಿಪು ಹಳೆಮನಿ, ಬಸವರಾಜ ಹುಲಮನಿ, ಅನಿಲ ಪಾಟೀಲ, ಅಡಿವೆಪ್ಪ ತೋಟಗಿ, ಉಳವಪ್ಪ ರೊಟ್ಟಿ, ಸಮೀರ ಸುತಗಟ್ಟಿ, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು