ಚಾಮರಾಜನಗರ: ಕಳೆದ ಎರಡು ತಿಂಗಳ ಹಿಂದೆ ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸಂಭವಿಸಿದ ಆಕ್ಸಿಜನ್ ಕೊರತೆಯಿಂದ ಸಾವು ಪ್ರಕರಣಕ್ಕೆ ರಾಜ್ಯ ಸರ್ಕಾರವು ನೇಮಿಸಿರುವ ನ್ಯಾ.ಬಿ.ಎ.ಪಾಟೀಲ್ ತನಿಖಾ ಆಯೋಗದ ಮುಂದೆ ಸಂತ್ರಸ್ಥ ಕುಟುಂಬಸ್ಥರು ಹಾಜರಾದರು.
ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ತೆರೆದಿರುವ ನ್ಯಾ. ಬಿ.ಎ.ಪಾಟೀಲ್ ತನಿಖಾ ಆಯೋಗದ ಮುಂದೆ ಸಂತ್ರಸ್ಥ ಕುಟುಂಬದವರಿ ಹಾಜರಾಗಿ ವಿಚಾರಣೆಗೆ ಒಳಪಟ್ಟು ಘಟನೆಗೆ ಸಂಬಂಧ ಪಟ್ಟಂತೆ ಮಾಹಿತಿ ನೀಡಿದರು.
ಪ್ರತಿ ಕುಟುಂಬಸ್ಥರು ಸುಮಾರು ಅರ್ಧ ಗಂಟೆಗಳ ನ್ಯಾ. ಬಿ.ಎ. ಪಾಟೀಲ್ ರವರ ತನಿಖಾ ಆಯೋಗವು ವಿಚಾರಣೆ ನಡೆಸಿ ದಾಖಲೆ ಮಾಡಿಕೊಂಡಿತು. ಚಾಮರಾಜನಗರ ಜಿಲ್ಲೆಯ ಮೃತ ಕುಟುಂಬಗಳ ಸದಸ್ಯರು ಹಾಜರಾಗಿ ಆಕ್ಸಿಜನ್ ದುರಂತದ ಬಗ್ಗೆ ವಿವರಗಳನ್ನು ನೀಡಿದರು.