ಬೆಂಗಳೂರು: ಕೋಲಾರದಲ್ಲಿ ಸಿದ್ದರಾಮಯ್ಯ 50 ಸಾವಿರ ಕುರ್ಚಿಗಳನ್ನು ಹಾಕಿಸಿದ್ರು. ನಿಮ್ಮ ಯೋಗ್ಯತೆಗೆ ಅಷ್ಟು ಜನ ಸೇರಲಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು. ಕಾಂಗ್ರೆಸ್ ಅಂದ್ರೆ ಹುಚ್ಚರ ಸಂತೆ, ನಿತ್ಯ ಸಂಜೆವರೆಗೂ ಬರೀ ಸುಳ್ಳು. ರಮೇಶ್ ಜಾರಕಿಹೊಳಿ ಈ ಹಿಂದೆ ಸಿದ್ದರಾಮಯ್ಯ ಜೊತೆ ಇದ್ದರು.
ಕುಮಟಳ್ಳಿ, ಉಮೇಶ್ ಜಾಧವ್ ಕೂಡ ಅವರ ಜೊತೆಯಲ್ಲೇ ಇದ್ರು. ಸರ್ಕಾರ ಬೀಳಬೇಕು ಅಂತ ನೀವು ಈ ಹಿಂದೆ ಷಡ್ಯಂತ್ರ ಮಾಡಿದ್ರಿ. ಹೆಚ್ಡಿಕೆ ಸಿಎಂ ಆಗಿರಬಾರದೆಂದು ಸರ್ಕಾರ ಬೀಳಿಸಲು ಯತ್ನಿಸಿದ್ರಿ. ನಿಮ್ಮ ಚಟಕ್ಕೆ ಚುನಾವಣೆ ಹತ್ತಿರ ಬಂತು ಅಂತ ದೂರು ಕೊಡ್ತಿದ್ದೀರಾ ಎಂದು ಪಶ್ನಿಸಿದರು.