ಅಧಿಕಾರಿಗಳ ಸಭೆ ಬಳಿಕ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ವಿಧಾನಸೌಧದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿ, ಪ್ರಪ್ರಥಮವಾಗಿ ರಾಜ್ಯದ ಕೃಷಿ ಇಲಾಖೆ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇನೆ. ಮುಂಗಾರಿಗೆ ಯಾವ ರೀತಿ ಸಿದ್ದತೆ ಬಗ್ಗೆ ಚರ್ಚೆ ಮಾಡಿದ್ದೇವೆ. ಬಿತ್ತನೆಗೆ ಏನೆಲ್ಲಾ ಕ್ರಮ ಕೈಗೊಳ್ಳಬೇಕೋ ಅದಕ್ಕೆಲ್ಲಾ ರೆಡಿ ಇದ್ದೇವೆ, ಗೊಬ್ಬರದ ವಿಷಯದಲ್ಲಿಯೂ ನಾವು ಸಿದ್ದರಿದ್ದೇವೆ.
ಜೂನ್ನಲ್ಲಿ ಮುಂಗಾರು ಆರಂಭವಾಗುತ್ತೆ ಅದಕ್ಕೆ ಸಿದ್ದರಿದ್ದೀವೆ. 2 ಹೆಕ್ಟೇರ್ಗೆ ಸೀಮಿವಾದಂತರ 140 ಕೋಟಿ ಅಪ್ರೂವ್ ಆಗಬೇಕಾಗಿದೆ, ನೆಟೆ ರೋಗಕ್ಕೆ ಬಿಡುಗಡೆ ಆಗಬೇಕಾಗಿತ್ತು. ಅವರು ಅನ್ವಸ್ ಮೆಂಟ್ ಮಾಡಿದ್ರು ಕೊಡಲಿಲ್ಲ ನಾವು ಮಾಡಬೇಕಾಗಿದೆ. 1 ಕೋಟಿ ಗಿಡ ಗಳನ್ನು ನೆಡುವುದಕ್ಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.