ಮಂಡ್ಯ: ಪ್ರಮೋಷನ್‌ಗಾಗಿ ನಕಲಿ ಮಾರ್ಕ್ಸ್‌ಕಾರ್ಡ್ ನೀಡಿದ್ದ ಅಧಿಕಾರಿಗಳು ಇದೀಗ ಆಧಾರ ಸಹಿತ ಸಿಕ್ಕಿಬಿದ್ದಿದ್ದು ಅವರೆಲ್ಲಾ ಸೇವೆಯಿಂದ ವಜಾಗೊಳ್ಳುವ ಭೀತಿಯಲ್ಲಿದ್ದಾರೆ.
ಮಂಡ್ಯ ಸೇರಿದಂತೆ ರಾಜ್ಯದ ಹಲವೆಡೆ ನಕಲಿ ಪ್ರಮಾಣ ಪತ್ರ ನೀಡಿ ಮುಂಬಡ್ತಿ ಪಡೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಈಗಾಗಲೇ ರಾಜ್ಯದ 7 ಅಧಿಕಾರಿಗಳ ವಿರುದ್ಧ FIR ದಾಖಲಾಗಿದ್ದು, ಅವರನ್ನು ಸೇವೆಯಿಂದ ವಜಾಗೊಳಿಸಲು ಸೂಚನೆ ನೀಡಲಾಗಿದೆ. ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಈ ಸೂಚನೆ ನೀಡಿದ್ದಾರೆ. ನಿರ್ದೇಶನಾಲಯ ಹಂತದಲ್ಲಿ ನಿಯಮಗಳನ್ವಯ ಮುಂಬಡ್ತಿ ಪಡೆಯಲು ಈ ಏಳು ಅಧಿಕಾರಿಗಳು ನಕಲಿ ಅಂಕಪಟ್ಟಿ ಸಲ್ಲಿಕೆ ಮಾಡಿದ್ದಾರೆ ಎನ್ನಲಾಗಿದೆ. ನಕಲಿ ಅಂಕಪಟ್ಟಿ ಸಲ್ಲಿಸಿದ್ದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಾಹಿತಿ ಹಕ್ಕು ಹೋರಾಟಗಾರ ರವೀಂದ್ರ, ಈ ಹಿಂದೆ ಯೋಜನೆ ಮತ್ತು ಸಾಂಖ್ಯಿಕ ಸಚಿವರಾಗಿದ್ದ ನಾರಾಯಣಗೌಡರಿಗೆ ದೂರು ಸಲ್ಲಿಸಿದ್ದರು.
ನಂತರ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ಮುಖ್ಯ ಕಾರ್ಯದರ್ಶಿಗೆ ವರದಿ ನೀಡುವಂತೆ ಸಚಿವರು ಸೂಚನೆ ನೀಡಿದ್ದರು. ಅದರಂತೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ನೇತೃತ್ವದಲ್ಲಿ ಪದವಿ ನೈಜ್ಯತೆ ಪರಿಶೀಲನೆ ಸಭೆಯನ್ನು ನಡೆಸಲಾಗಿದ್ದು, ಸಭೆಯಲ್ಲಿ ಉನ್ನತ ಶಿಕ್ಷಣ, ಸಾಂಖ್ಯಿಕ, ಆಡಳಿತ ಸುಧಾರಣೆ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು. ಈ ಸಭೆಯಲ್ಲಿ 45 ಜನ ಅಧಿಕಾರಿಗಳ ಪದವಿ ನೈಜ್ಯತೆ ಪರಿಶೀಲನೆ ನಡೆಸಲಾಯಿತು. ಇದರಲ್ಲಿ 7 ಅಧಿಕಾರಿಗಳ ಪ್ರಮಾಣಪತ್ರ ನಕಲಿ ಎಂದು ಧೃಡಪಟ್ಟ ಹಿನ್ನಲೆ ನಿಯಮಾನುಸಾರ ಪರಿಶೀಲಿಸಿ ಸೇವೆಯಿಂದ ವಜಾಗೊಳಿಸುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಮಂಡ್ಯದ ಸಹಾಯಕ ಸಾಂಖ್ಯಿಕ ಅಧಿಕಾರಿ ಪುಟ್ಟರಾಜು, ಬೀದರ್‌ನ ಪ್ರಶಾಂತ್, ಅಶೋಕ್, ಅಬ್ದುಲ್ ರಬ್, ಬಾಲಾಜಿ ಬಿರಾದಾರ್, ರಾಜ ಕುಮಾರ, ಬಾಗಲಕೋಟೆಯ ಸತೀಶ್ ಕೆ.ನಾಯ್ಕ ಸೇರಿದಂತೆ ವಿವಿಧ ಜಿಲ್ಲೆಯ ಅಧಿಕಾರಿಗಳ ತಲೆತಂಡ ಸಾಧ್ಯತೆ ದಟ್ಟವಾಗಿದೆ. ಇವರೆಲ್ಲಾ ಸಹಾಯಕ ಸಾಂಖ್ಯಿಕ ಅಧಿಕಾರಿ, ಸಹಾಯಕ ನಿರ್ದೇಶಕ ವೃಂದಕ್ಕೆ ಬಡ್ತಿ ಪಡೆಯಲು ನಕಲಿ ಪ್ರಮಾಣ ಪತ್ರ ಸಲ್ಲಿಕೆ ಮಾಡಿದ್ದರು. ಈ ಏಳು ಜನ ಅಧಿಕಾರಿಗಳು ರಾಜ್ಯ, ಹೊರ ರಾಜ್ಯದ ವಿವಿಗಳಿಂದ ನಕಲಿ ಪದವಿ ಪಡೆದಿದ್ದರು. ರಾಜ್ಯದ ಪತಿಷ್ಠಿತ ವಿ.ವಿ ಹೊರತುಪಡಿಸಿ ಮಣಿಪುರದ ಶಾಂಘೈ, ಉತ್ತರ ಪ್ರದೇಶದ ಶ್ಯಾಂ ಹಿಗ್ಗಿನ್ ಬಾತಂ ಅಗ್ರಿಕಲ್ಚರ್, ಬಿಲಾಸ್‌ಪುರ್‌ನ ಸಿ.ವಿ. ರಾಮನ್, ತಮಿಳುನಾಡಿನ ವಿನಾಯಕ ಮಿಷನ್ ಸೇರಿದಂತೆ ಇನ್ನಿತರ ರಾಜ್ಯಗಳ ವಿ.ವಿ.ಗಳ ಪದವಿ ಪ್ರಮಾಣಪತ್ರ ಸಲ್ಲಿಕೆ ಮಾಡಲಾಗಿದೆ.