ಕೂಗು ನಿಮ್ಮದು ಧ್ವನಿ ನಮ್ಮದು

ಮರಕ್ಕೆ ಡಿಕ್ಕಿ ಹೊಡೆದ ಕಾರು: ಭೀಕರ ಅಪಘಾತದಲ್ಲಿ ಮೂವರ ದುರ್ಮರಣ

ಚಿತ್ರದುರ್ಗ: ಚಿತ್ರದುರ್ಗದಲ್ಲಿ ಬೆಳ್ಳಂಬೆಳಿಗ್ಗೆ ಜವರಾಯ ತನ್ನ ಅಟ್ಟಹಾಸ ಮೇರೆದಿದ್ದಾನೆ. ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿ ಮೂವರು ಗಂಭೀರವಾಗಿ ಗಾಯಗೊಂಡಿರುರುವ ಘಟನೆ ಚಿತ್ರದುರ್ಗದ ಹೊಸದುರ್ಗದಲ್ಲಿ ನಡೆದಿದೆ.

ಹೊಸದುರ್ಗ ತಾಲೂಕಿನ ಜೋಡಿ ರಂಗಾಪುರ ಬಳಿ ಈ ದುರ್ಘಟನೆ ನಡೆದಿದ್ದು, ಸಾವನ್ನಪ್ಪಿರುವ ದುರ್ದೈವಿಗಳನ್ನು ಶಾರದಾ 60, ಗೀತಾ 32, ದೃತಿ 05 ಎಂದು ಗುರುತಿಸಲಾಗಿದೆ. ಇನ್ನು ಗಾಯಗೊಂಡವರು ನಾಗೇಶ್, ದಯಾನಂದ್ ಮತ್ತು ಸುಧೀಂದ್ರ ಎಂದು ತಿಳಿದು ಬಂದಿದ್ದು ಇವರನ್ನು ಹೊಸದುರ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರೆಲ್ಲರೂ ಕೂಡ ಕುಂದಾಪುರದ ಮೂಲದವರು. ಮನೆ ದೇವರ ಪೂಜೆ ಮುಗಿಸಿ ವಾಪಾಸ್ ಬೆಂಗಳೂರಿಗೆ ತೆರಳುವಾಗ ದುರ್ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದ್ದು, ಕಾರು ನುಜ್ಜುಗಜ್ಜಾಗಿದೆ. ಈ ಸಂಬಂಧ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!