ಕೂಗು ನಿಮ್ಮದು ಧ್ವನಿ ನಮ್ಮದು

ಡಿಜೆಹಳ್ಳಿ, ಕೆಜೆಹಳ್ಳಿ ಪಾದರಾಯನಪುರ ನಂತ್ರ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲೂ ಜಮೀರ್ ಹೆಸ್ರು: ಸಿ.ಟಿ.ರವಿ

ಚಿಕ್ಕಮಗಳೂರು: ಡಿಜೆಹಳ್ಳಿ, ಕೆಜೆಹಳ್ಳಿ, ಪಾದರಾಯನಪುರದಲ್ಲಿ ನಡೆದ ಗಲಭೆಯಲ್ಲೂ ಜಮೀರ್ ಅಹ್ಮದ್ ಖಾನ್ ಹೆಸರು ಕೇಳಿ ಬಂದಿತ್ತು. ಈಗ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲೂ ಜಮೀರ್ ಅಹ್ಮದ್ ಹೆಸರು ಕೇಳಿ ಬರುತ್ತಿದೆ ಎಂದು ಬಿಜೆಪಿ ರಾಷ್ಟ್ರ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ಹುಬ್ಬಳಿ ಗಲಭೆಕೋರರಿಗೆ ಜಮೀರ್ ಅಹ್ಮದ್ ಖಾನ್ ಅವರು ರಂಜಾನ ಕಿಟ್ ಮತ್ತು ಹಣ ವಿತರಣೆ ಮಾಡಿದ ವಿಚಾರವಾಗಿ ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ ಅವರು, ಡಿಜೆಹಳ್ಳಿ, ಕೆಜೆಹಳ್ಳಿ ಪಾದರಾಯನಪುರದಲ್ಲಿ ನಡೆದ ಗಲಭೆ ಹಿಂದೆ ಕಾಂಗ್ರೆಸ್ ಪಾತ್ರವಿತ್ತು. ಅವರಿಗೆ ಹಣ, ವಕೀಲರ ನೇಮಕ ಮಾಡಿದ್ದು ಕಾಂಗ್ರೆಸ್, ಆ ಸಂದರ್ಭದಲ್ಲಿ ಕೂಡ ಜಮೀರ್ ಹೆಸರು ಕೇಳಿ ಬಂದಿತ್ತು.

ಈಗ ಹುಬ್ಬಳ್ಳಿ ಪ್ರಕರಣದಲ್ಲೂ ಜಮೀರ್ ಹೆಸರು ಕೇಳಿ ಬರುತ್ತಿದೆ. ಮಗು ಚಿವುಟಿ ತೊಟ್ಟಿಲು ತೂಗುವ ಕೆಲಸವನ್ನು ಮಾಡುತ್ತಿದ್ದಾರೆ. ಕೋಮುಗಲಭೆ ಹುಟ್ಟುಹಾಕಿ ವೋಟ್ ಬ್ಯಾಂಕ್ ಗಟ್ಟಿಯಾಗಿ ಇಟ್ಟಿಕೊಳ್ಳಲು ಮುಂದಾಗಿದ್ದಾರೆ. ಅವರಿಗೆ ನೆರವು ಕೊಡುವ ಪಾತ್ರ ಕಾಂಗ್ರೆಸ್‍ನದ್ದು ಇರಬಹುದು ಎಂಬ ಅನುಮಾನಕ್ಕೆ ಸಾಕ್ಷಿ ಒದಗಿಸುವ ರೀತಿ ಜಮೀರ್, ಕಾಂಗ್ರೆಸ್ ನಡುವಳಿಕೆ ಇದೆ ಎಂದಿದ್ದಾರೆ. ಹಿಜಾಬ್ ಹಿಂದೆ ಪಿಎಫೈ ಒಂದೇ ಅಲ್ಲ ಕಾಂಗ್ರೆಸ್ ಇದೆ ಎನ್ನುವ ಅನುಮಾನವಿತ್ತು.

ಆಗ ಜಾತ್ಯಾತಿತಕ್ಕೆ ಚಾಂಪಿಯನ್ ಎನಿಸಿಕೊಂಡವರು ಹಿಜಬ್ ಪರ ನಿಂತರು. ವಕೀಲರಿಗೆ ನೆರವು ಕೊಟ್ಟಿದ್ದು ಕಾಂಗ್ರೆಸ್, ಅವರೆಲ್ಲಾ 5-10 ಸಾವಿರಕ್ಕೆ ಬರುವ ವಕೀಲರಲ್ಲ. ಎದ್ದು ನಿಂತರೆ ಐವತ್ತು ಲಕ್ಷ ಬಿಲ್ ಮಾಡುತ್ತಾರೆ. ಅವರೆಲ್ಲಾ ಕಾಂಗ್ರೆಸ್ ಜೊತೆ ಸಂಪರ್ಕದಲ್ಲಿದ್ದ ವಕೀಲರಾಗಿದ್ದಾರೆ. ಹಿಜಬ್, ಪಾದರಾಯನಪುರ, ಡಿಜೆಹಳ್ಳಿ-ಕೆಜೆಹಳ್ಳಿ, ಹುಬ್ಬಳ್ಳಿ ಪ್ರಕರಣದಲ್ಲಿ ಕಾಂಗ್ರೆಸ್ ಪಾತ್ರ ಇರುವುದು ಸ್ಪಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ.

ತಾನು ಕಳ್ಳನ ಪರ ಎಂಬ ಮಾತು ಕಾಂಗ್ರೆಸ್‍ಗೆ ಅನ್ವಯವಾಗುತ್ತದೆ. ತಿಪ್ಪೆ ಸಾರಿಸುವುದರಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು, ಬಿಜೆಪಿಯೂ ಹಾಗೇ ಎಂದು ಭಾವಿಸಿದ್ದಾರೆ. ಬಿಜೆಪಿ ತಿಪ್ಪೆ ಸಾರಿಸುವುದಾಗಿದ್ದರೆ ದಿವ್ಯಾ ಹಾಗರಗಿ ಮೇಲೆ ಎಫ್‍ಐಆರ್ ಆಗುತ್ತಿರಲಿಲ್ಲ. ಎಫ್‍ಐಆರ್ ಮಾಡುವುದರ ಜೊತೆಗೆ, ಸಿಐಡಿಗೆ ವಹಿಸಿ, ಆಕೆಯ ಗಂಡನನ್ನು, ಪ್ರಕರಣದಲ್ಲಿರುವ ಎಲ್ಲರನ್ನು ಬಿಜೆಪಿ ಸರ್ಕಾರ ಬಂಧಿಸಿದೆ.

ಬಂಧನವಾಗದಿದ್ದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುತ್ತೇವೆ ಅಂತ ಹೇಳಿದ್ದು ಬಿಜೆಪಿ, ಯುಪಿ ಮಾದರಿಯಲ್ಲಿ ಕ್ರಮಕೈಗೊಳ್ಳುತ್ತೇವೆ ಎಂದು ಪೇಪರ್ ನೋಟಿಫಿಕೇಶನ್ ಕೊಟ್ಟಿದ್ದು ಬಿಜೆಪಿ ಎಂದು ಹರಿಹಾಯ್ದಿದ್ದಾರೆ. ಹಿಂದೆ ಇದ್ದ ಮುಖ್ಯಮಂತ್ರಿ ಮೇಲೆ ವಾಚ್ ಪ್ರಕರಣ ಬಂದಿತ್ತು. ಕಳ್ಳತನದ ವಾಚು, ಅಕ್ರಮದ ವಾಚು ಸಿಎಂ ಕೈಗೆ ಹೇಗೆ ಬಂತು ಎಂದು ತನಿಖೆಯೇ ಆಗಲಿಲ್ಲ.

ರಿಡ್ಯೂ ಹೆಸರಲ್ಲಿ ಅರ್ಕಾವತಿ ಭೂ ಹರಗದಲ್ಲಿ ಸಾವಿರಾರು ಎಕರೆ ಡಿನೋಟಿಫೈ ಮಾಡಿದರು. ಹತ್ತು- ಇಪ್ಪತ್ತು ಲಕ್ಷ, ಕೆಲವಡೆ ಐವತ್ತು ಲಕ್ಷ ಪಡೆದರು, ತನ್ನ ಕುತ್ತಿಗೆಗೆ ಬರುತ್ತದೆ ಎನ್ನುತ್ತಿದ್ದ ಹಾಗೆಯೇ ತಿಪ್ಪೆ ಸಾರಿಸಿದರು. ಕೆಂಪಣ್ಣ ಆಯೋಗ ಕೂಡ ಕಾಂಗ್ರೆಸ್ ಪಾತ್ರವನ್ನು ಎತ್ತಿ ಹಿಡಿದಿತ್ತು. ಪ್ರಶಂಸೆ ಹೇಳುವ ಮನಸ್ಥಿತಿ ಅವರಿಗಿಲ್ಲ, ಕಾಂಗ್ರೆಸ್‍ನಂತೆ ಬಿಜೆಪಿ ಅಲ್ಲ. ಈ ವಿಷಯದಲ್ಲಿ ಯಾರೇ, ಎಷ್ಟೆ ಪ್ರಭಾವಶಾಲಿಗಳಿದ್ದರೂ ಶಿಕ್ಷೆಯಾಗುತ್ತದೆ. ಮುಚ್ಚಾಕುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

error: Content is protected !!