ಬೆಂಗಳೂರು: ರಾಷ್ಟ್ರಧ್ವಜ, ತ್ರಿವರ್ಣಧ್ವಜ ಅದರಲ್ಲಿ 2 ಮಾತಿಲ್ಲ. ಭಗವಧ್ವಜ ಪರಂಪರೆ ಇಂದ ಬಂದಿದ್ದು, ನಮ್ಮ ಹೃದಯದಲ್ಲಿ ಇದೆ. ಆದ್ರೆ ಕಾಂಗ್ರೆಸ್ ನವರ ಹೋರಾಟ ಬೂಟಾಟಿಕೆಯಾಗಿದೆ ಎಂದು ವಿರೋಧ ಪಕ್ಷದ ನಿಲುವಿನ ಕುರಿತಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದ್ರು. ವಿಧಾನಸೌದಲ್ಲಿ ಮಾತನಾಡಿದ ಸಿ.ಟಿ ರವಿ, ಧ್ವಜ ಹಿಡಿದು ಹೋದವರನ್ನ ಕೊಂದವರು ಕಾಂಗ್ರೆಸ್‍ನವರು. ಈಗ ಕಾಂಗ್ರೆಸ್ ನಾಯಕರು ಮಾತಾಡುತ್ತಿರುವುದು ಹಾಸ್ಯಾಸ್ಪದವಾಗಿದೆ.
ನನ್ನ ಹೇಳಿಕೆಗೆ ನಾನು ಬದ್ದವಾಗಿದ್ದೇನೇ. PFI, SDPI ನಿಷೇಧ ವಿಚಾರ ಸಿಎಂ ಗೃಹ ಸಚಿವರನ್ನ ಕೇಳಬೇಕು ಎಂದಿದ್ದಾರೆ. ಹರ್ಷ ಹತ್ಯೆ ಮಾಡಿದವರು ಒಂದು ಕೋಮಿಗೆ ಸೇರಿದವರು. ಹತ್ಯೆ ಮಾಡಬೇಕೆಂದು ಯೋಜನಾಬಧ್ಧವಾಗಿ ಮಾಡಿದ್ದಾರೆ. ಬೆಂಗಳೂರಿನಿಂದ ಕರೆಸಿಕೊಂಡಿದ್ದಾರೆ. ಕೇವಲ ಹಿಂದೂಗಳಿಗೆ ಮಾತ್ರ ಅಲ್ಲ, ರಾಜ್ಯದ ಜನರಿಗೆ ರಕ್ಷಣೆ ಕೊಡೋದು ನಮ್ಮ ಕರ್ತವ್ಯವಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದಲ್ಲೂ ಸಾಲು ಕೊಲೆ ಸಾವುಗಳು ಸಂಭವಿಸಿದೆ. ನನಗೂ ಭಾವನೆಗಳಿವೆ. ಹಾಗಂತ ಸರ್ಕಾರ ಭಾವನೆಗಳ ಆಧಾರದ ಮೇಲೆ ನಡೆಯಲ್ಲ, ಕಾನೂನಿನಂತೆ ನಡೆಯುತ್ತದೆ. ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ಆಯ್ತು, ಕಾಂಗ್ರೆಸ್ ನವರು ಏನ್ಮಾಡಿದ್ರು? ಎಂದು ಸಿ.ಟಿ.ರವಿ ಪ್ರಶ್ನೆ ಮಾಡಿದ್ರು.