ಕೂಗು ನಿಮ್ಮದು ಧ್ವನಿ ನಮ್ಮದು

ಸಿಟಿ ರವಿಯನ್ನು ಸೋಲಿಸಿದ ಕಾಂಗ್ರೆಸ್ನ ತಮ್ಮಯ್ಯ: ಜೆಡಿಎಸ್ ಎಂಎಲ್ಸಿಗೆ ಹಾಲಿನ ಅಭಿಷೇಕ

ಚಿಕ್ಕಮಗಳೂರು: ಮೇ.10 ರಂದು ನಡೆದಿದ್ದ ರಾಜ್ಯ ವಿಧಾನಸಭೆ ಚುನಾವಣಾ ಮತದಾನದ ಫಲಿತಾಂಶ ನಿನ್ನೆ ಪ್ರಕಟಗೊಂಡಿದೆ. ಅದರಂತೆ ರಾಜ್ಯದಲ್ಲಿ ಕಾಂಗ್ರೆಸ್ 137 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. ಈ ಮಧ್ಯೆ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಸಿಟಿ ರವಿ ಅವರ ಹೀನಾಯ ಸೋಲು ಹಿನ್ನಲೆ ಎಂಎಲ್ಸಿ ಎಸ್.ಎಲ್ ಭೋಜೇಗೌಡರಿಗೆ ಜೆ.ಡಿಎಸ್ ಕಾರ್ಯಕರ್ತರು ಹಾಲಿನ ಅಭಿಷೇಕ ಮಾಡಿದ್ದಾರೆ.

ಹೌದು ಕಾಂಗ್ರೆಸ್ ಅಭ್ಯರ್ಥಿ ತಮ್ಮಯ್ಯ ಗೆಲುವು ಹಿನ್ನೆಲೆ ನಗರದ ಹೊಸ ಮನೆ ಬಡಾವಣೆಯಲ್ಲಿ ಭೋಜೇಗೌಡರಿಗೆ ಹಾಲಿನ ಅಭಿಷೇಕ ಮಾಡಿ, ಸನ್ಮಾನಿಸಿದ್ದಾರೆ. ಕಾಂಗ್ರೆಸ್ ಜೊತೆ ಭೋಜೇಗೌಡ ಒಪ್ಪಂದ ಮಾಡಿಕೊಂಡಿದ್ದು, ಕಾಂಗ್ರೆಸ್ ಪರವಾಗಿ ಮತಯಾಚನೆ ಮಾಡಿದ್ದರು.

error: Content is protected !!