ಕೂಗು ನಿಮ್ಮದು ಧ್ವನಿ ನಮ್ಮದು

ಸಿಟಿ ರವಿ‌ ವಿರುದ್ಧ ನಕಲಿ ಪೋಸ್ಟ್ ಪ್ರಕರಣ: ಕಾಂಗ್ರೆಸ್ ಕಾರ್ಯಕರ್ತನ ಬಂಧನ

ಚಿಕ್ಕಮಗಳೂರು: ಶಾಸಕ ಸಿ.ಟಿ ರವಿ ಅವರು ಲಿಂಗಾಯತರಿಗೆ ಪ್ರಾಮುಖ್ಯತೆ ಕೊಡಬೇಕಿಲ್ಲ ಎಂದು ಹೇಳಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಸುಳ್ಳು ಸುದ್ದಿ ಹಬ್ಬಿಸಿದ್ದ ಕಾಂಗ್ರೆಸ್ ಕಾರ್ಯಕರ್ತನನ್ನು ಬಸವನಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ಮೂಲದ ಹರೀಶ್ ಬಂಧಿತ ಕಾಂಗ್ರೆಸ್ ಕಾರ್ಯಕರ್ತ. ದಾವಣಗೆರೆಯಲ್ಲಿ ಹರೀಶ್ ಬಂಧಿಸಿ ಕರೆತರಾಗಿದೆ. ಹರೀಶ್ ಸೇರಿದಂತೆ ಮೂವರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿತ್ತು. ನಕಲಿ ಪೋಸ್ಟ್ ವೈರಲ್ ಹಿನ್ನೆಲೆ ಚಿಕ್ಕಮಗಳೂರು ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ ಅವರು ದೂರು ನೀಡಿದ್ದರು. ನಕಲಿ ಪೋಸ್ಟ್ ವೈರಲ್ ಬೆನ್ನಲ್ಲೇ ಸಿ.ಟಿ ರವಿ‌ ವಿರುದ್ಧ ರಾಜ್ಯಾದ್ಯಂತ ಲಿಂಗಾಯತ ಸಮುದಾಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.

ಠಾಣೆಯಿಂದ ಕಾಂಗ್ರೆಸ್ ಕಾರ್ಯಕರ್ತನನ್ನ ಹೊರ ಕಳಿಸುವಂತೆ ಪಟ್ಟು ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ನಗರದ ಬಸವನಹಳ್ಳಿ ಪೊಲೀಸ್ ಠಾಣೆ ಮುಂದೆ ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ವಾಕ್ಸಮರ ಉಂಟಾಗಿದೆ. ಪೊಲೀಸ್ ಠಾಣೆ ಮುಂದೆ ಕಾರ್ಯಕರ್ತ ಬಹಿರಂಗ ಕ್ಷಮೆ ಕೇಳಿದ್ದಾನೆ. ಆದರೂ ಠಾಣೆಯಿಂದ ಹೊರ ಕಳಿಸುವಂತೆ ಪಟ್ಟು‌ ಹಿಡಿದ್ದಾನೆ. ಈ ವೇಳೆ ಬಿಜೆಪಿ ಕಾರ್ಯಕರ್ತರು ಪೊಲೀಸ್ ಠಾಣೆಯ ಒಳ ನುಗ್ಗಲು ಯತ್ನಿಸಿದ್ದಾರೆ. ನ್ಯಾಯಾಲಯದಿಂದ ಬೆಲ್ ಸಿಕ್ಕಿರುವ ಹಿನ್ನೆಲೆ ಠಾಣೆಯಿಂದ ಕಾಂಗ್ರೆಸ್ ಕಾರ್ಯಕರ್ತನನ್ನ ಹೊರ ಕಳಿಸುವಂತೆ ಪಟ್ಟು ಹಿಡಿದ್ದಾರೆ. ಈ ವೇಳೆ ಬಿಜೆಪಿ ಕಾರ್ಯಕರ್ತರು-ಪೊಲೀಸ್ ಮಧ್ಯೆ ವಾಕ್ಸಮರ, ತಳ್ಳಾಟ ನೂಕಾಟ ನಡೆದಿದೆ.

ಚಿಕ್ಕಮಗಳೂರಿನಲ್ಲಿ ಹೇಗಿದ್ರು ಸಿಟಿ ರವಿನೇ ಗೆಲ್ಲೋದು ಸರ್
ಚಿಕ್ಕಮಗಳೂರಿನಲ್ಲಿ ಹೇಗಿದ್ದರು ಸಿ.ಟಿ ರವಿನೇ ಗೆಲ್ಲೋದು ಸರ್..! ಎನ್ನುವ ಕಾಂಗ್ರೆಸ್ ಮುಖಂಡ ರಸೂಲ್ ಖಾನ್ ಅವರ ಆಡಿಯೋ ವೈರಲ್ ಆಗಿದೆ. ಇನ್ನು ಆಡಿಯೋ ವೈರಲ್ ಆಗುತ್ತಿದ್ದಂತೆ ರಸೂಲ್ ಖಾನ್ ಅವರನ್ನು ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನದಿಂದ ಕಾಂಗ್ರೆಸ್ ವಜಾ ಮಾಡಿದೆ. ಪಕ್ಷಕ್ಕೆ ಮುಜುಗರ ತರುವ ಹೇಳಿಕೆ ರಸೂಲ್ ಖಾನ್ ನೀಡಿದ್ದಾರೆಂದು ರಾಜ್ಯ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೀಗಾ ವಜಾ ಮಾಡಿದ್ದಾರೆ.

ನಿನ್ನೆ (ಏ.4) ತುಮಕೂರಿನಲ್ಲಿ ರಸೂಲ್ ಖಾನ್ ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ, ಇತ್ತೀಚಿಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಹೆಚ್‌.ಡಿ ತಮ್ಮಯ್ಯ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿದ್ದರು. ಈ ವೇಳೆ ತಮ್ಮಯ್ಯ ಅವರಿಗೆ ಕೈ ಟಿಕೆಟ್ ನೀಡದಂತೆ ಮುಸ್ಲಿಂ ಸಮುದಾಯ ಒತ್ತಾಯ ಮಾಡಿತ್ತು. ಕಾಂಗ್ರೆಸ್ ಟಿಕೆಟ್ ತಮ್ಮಯ್ಯ ಅವರಿಗೆ ನೀಡಿದರೇ ಮತದಾನದಿಂದ ದೂರ ಉಳಿಯುವ ಎಚ್ಚರಿಕೆ ನೀಡಲಾಗಿತ್ತು. ಅಲ್ಲದೆ ಟಿಕೆಟ್ಗೆ ಅರ್ಜಿ ಹಾಕಿರುವ ಆರು ಜನರಲ್ಲಿ ಒಬ್ಬರಿಗೆ ಟಿಕೆಟ್ ನೀಡುವಂತೆ ಮುಸ್ಲಿಂ ಸಮುದಾಯ ಒತ್ತಾಯ ಮಾಡಿತ್ತು.

error: Content is protected !!