ಕೂಗು ನಿಮ್ಮದು ಧ್ವನಿ ನಮ್ಮದು

ಜಿಲ್ಲಾವಾರು ಪರಿಗಣಿಸಿ ಹೈಕಮಾಂಡ್ ನನಗೆ ಅವಕಾಶವನ್ನು ಕೊಟ್ಟರೆ ನಾನು ಕೆಲಸ ಮಾಡ್ತೀನಿ: ನಿರಂಜನ್ ಕುಮಾರ್

ಚಾಮರಾಜನಗರ: ಹೌದು ಸಚಿವ ಸ್ಥಾನಕ್ಕಾಗಿ ನಾನು ಹೈಕಮಾಂಡ್ ಮೇಲೆ ಒತ್ತಡವನ್ನು ಹಾಕಿಲ್ಲ ಎಂದು ಗುಂಡ್ಲುಪೇಟೆಯ BJP ಶಾಸಕ C.S ನಿರಂಜನ್ ಕುಮಾರ್ ಹೇಳಿದ್ರು. ಜೊತೆಗೆ ಸಚಿವ ಸಂಪುಟದಲ್ಲಿ ಹೊಸಬರಿಗೆ ಅವಕಾಶವನ್ನು ಕೋಡಲಾಗುತ್ತದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ. ಇನ್ನೂ ಹಳೆಬರು ಮತ್ತು ಯುವಕರನ್ನು ಸೇರಿಸಿ ಆಡಳಿತವನ್ನು ಚುರುಕುಗೊಳಿಸುವ ಕಾರ್ಯತಂತ್ರವು ಸಹ ಆಗುತ್ತಿವೆ. ಎಂದು C.S.ನಿರಂಜನ್ ಅವರು ಮಾದ್ಯಮದವರ ಮುಂದೆ ಇಂದು ಹೇಳಿದ್ದಾರೆ.

ಜೊತೆಗೆ ನಾನು ಚಾಮರಾ ಜನಗರದ ಜಿಲ್ಲೆಯಲ್ಲಿ BJPಯ ಏಕೈಕ ಶಾಸಕನಾಗಿದ್ದು, ಜಿಲ್ಲಾವಾರು ಪರಿಗಣಿಸಿ ಹೈಕಮಾಂಡ್ ನನಗೆ ಅವಕಾಶವನ್ನು ಕೊಟ್ಟರೆ ನಾನು ಕೂಡ ಒಳ್ಳೆಯ ರೀತಿಯಲ್ಲಿ ಕೆಲಸಗಳನ್ನು ಮಾಡುತ್ತೇನೆ ಎಂದ C.S.ನಿರಂಜನ್ ಅವರು ಸುದ್ದಿಗಾರರ ಮುಂದೆ ಹೇಳಿದ್ದಾರೆ. ಇನ್ನೂ
ಪ್ರಥಮ ಬಾರಿಗೆ ಗೆದ್ದಿರುವುದರಿಂದ ಒತ್ತಡವನ್ನು ತರಬಾರದು ಎಂಬುದು ನನ್ನ ನಿಲುವಾಗಿದ್ದು ಪಕ್ಷದ ಆದೇಶಕ್ಕೆ ನಾನು ಯಾವಗಲೂ ಬದ್ಧನಾಗಿರುತ್ತೇನೆ ಎಂದು ಬಿ.ಎಸ್.ಯಡಿಯೂರಪ್ಪನವರ ಆಪ್ತ ವಲಯದಲ್ಲಿರುವ C.S.ನಿರಂಜನ್ ಕುಮಾರ್ ಹೇಳಿದ್ರು.

error: Content is protected !!