ಕೂಗು ನಿಮ್ಮದು ಧ್ವನಿ ನಮ್ಮದು

ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಚನ್ನಪಟ್ಟಣದಿಂದಲೇ ಸ್ಪರ್ಧಿಸುತ್ತೇನೆ: ಸಿಪಿ ಯೋಗೇಶ್ವರ್

ಮಂಡ್ಯ: ಭಾರತೀಯ ಜನತಾ ಪಕ್ಷದ ಸಿಪಿ ಯೋಗೇಶ್ವರ್ ಮತ್ತು ಜನತಾದಳದ ಹೆಚ್ ಡಿ ಕುಮಾರಸ್ವಾಮಿ ನಡುವೆ ಜಾರಿಯಲ್ಲಿರುವ ಪ್ರತಿಷ್ಠೆಯ ಕಾಳಗ ಮುಂದಿನ ವಿಧಾನ ಸಭೆ ಚುನಾವಣೆ ಮುಗಿಯುವರೆಗೆ ನಡೆಯುವುದು ಶುಕ್ರವಾರ ಮತ್ತಷ್ಟು ಖಚಿತವಾಯಿತು.

ಮಂಡ್ಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಕೋಟಿ ಕನ್ನಡ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರೊಂದಿಗೆ ಮಾತಾಡಿದ ಯೋಗೇಶ್ವರ್ ತಾವು ಸಹ ಚನ್ನಪಟ್ಟಣ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ಹೇಳಿದರು. ನಿಮಗೆ ನೆನಪಿರಬಹುದು, ಇತ್ತೀಚಿಗೆ ಕುಮಾರಸ್ವಾಮಿ ಅವರು ಇದೇ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿದ್ದರು

error: Content is protected !!