ನವದೆಹಲಿ: ಕರ್ನಾಟಕದ ಈಗಿನ ನೂತನ ಸಿಎಂ ಬಸವರಾಜ್ ಬೊಮ್ಮಾಯಿಯವರು ಇವತ್ತು ಕೇಂದ್ರ ಹಣಕಾಸು ಸಚಿವೆಯಾದ ಸೀತಾರಾಮನ್ ಅವರನ್ನು ಇಂದು ಬೇಟಿ ಮಾಡಿದ್ದಾರೆ. ಜೊತೆಗೆ ರಾಜ್ಯಕ್ಕೆ ಬರಬೇಕಿರುವ J.S.T ಪರಿಹಾರದನವನ್ನು ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನ ಬಿಡುಗಡೆ ಮಾಡುವುದರ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ.
ಇನ್ನೂ ಮುಖ್ಯಮಂತ್ರಿ ಆಗಿ ಪ್ರಮಾಣ ವಚನವನ್ನು ಸ್ವೀಕರಿಸಿದ ಮೊದಲ ಬಾರಿಗೆ ದೆಹಲಿ ಪ್ರವಾಸವನ್ನು ಕೈಗೊಂಡರಿರುವ ಸಿಎಂ ಬಸವರಾಜ್ ಬೊಮ್ಮಾಯಿಯವರು ಈಗಾಗಲೇ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವರಾದ ಸಚಿವ ಅಮಿತ್ ಶಾ ಮತ್ತು ಮತ್ತಿತರ ಸಚಿವರನ್ನು ಸಿಎಂ ಬಸವರಾಜ್ ಬೊಮ್ಮಾಯಿಯವರು ಬೇಟಿಯಾಗಿದ್ದಾರೆ. ಇನ್ನೂ ಭಾರತೀಯ ಜನತಾ ಪಕ್ಷದ ವರಿಷ್ಠ ನಾಯಕರನ್ನು ಸಹ ಮುಖ್ಯಮಂತ್ರಿ ಬೊಮ್ಮಾಯಿಯವರು ಈ ಸಂದರ್ಭದಲ್ಲಿ ಬೇಟಿ ಮಾಡಲಿದ್ದಾರಂತೆ.