ಹಾಸನ: ರಾಜ್ಯದಲ್ಲಿ ಉಚಿತ ಕರೆಂಟ್ ಘೋಷಣೆ ಮಾಡಿ ದರ ಏರಿಕೆ ಮಾಡಿರುವ ವಿಚಾರವಾಗಿ ಮಾತನಾಡಿದ ಸಚಿವ ಭೈರತಿ ಸುರೇಶ್, ವಿದ್ಯುತ್ ದರ ಏರಿಕೆ ವಿಚಾರ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ. ನಾವು ಬಂದು ಕೇವಲ ಹದಿನೈದು ದಿನ ಆಗಿದೆ ದರ ಏರಿಕೆಗೆ ನಾವು ಯಾವುದೇ ಪ್ರಸ್ತಾಪ ಮಾಡಿಲ್ಲ. ಇದು ಹಳೆ ಸರ್ಕಾರ ಮಾಡಿರುವುದು, ಅದನ್ನ ಪರಿಶೀಲನೆ ಮಾಡಬಹುದು ಅನ್ನಿಸುತ್ತದೆ.
ಉಚಿತ ಕೊಡುಗೆಯಿಂದ ಅಭಿವೃದ್ಧಿಗೆ ಹಿನ್ನಡೆ ಆಗುವುದಿಲ್ಲ.. ದೇಶದಲ್ಲಿ ಕೊಟ್ಟ ಮಾತು ಉಳಿಸಿಕೊಂಡಿದ್ದರೆ ಅದು ಕಾಂಗ್ರೇಸ್ ಸರ್ಕಾರ ಮಾತ್ರ ಎಂದರು. ಉಚಿತ ಕೊಡುಗೆಯಿಂದ ರಾಜ್ಯ ದಿವಾಳಿ ಆಗಲಿದೆ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇಂತಹ ಆರೋಪ ಮಾಡುವವರು ಹಿಂದೆ ಯಾಕೆ ಕೊಟ್ಟ ಮಾತಿನಂತೆ ಯೋಜನೆ ಜಾರಿ ಮಾಡಿ ಅಂತಾ ಪ್ರಶ್ನಿಸಿದರು