ಧಾರವಾಡ: ಶಕ್ತಿ ಯೋಜನೆ ಉದ್ಘಾಟನೆಗೆ ಕ್ಷಣಗಣನೆ ಹಿನ್ನೆಲೆ ಧಾರವಾಡ ಬಸ್ ನಿಲ್ದಾಣದಲ್ಲಿ ಸಿದ್ದತೆ ನಡೆಯುತ್ತಿದೆ. ಶಕ್ತಿ ಯೋಜನೆಗೆ ನಾವು ಸಂಪೂರ್ಣ ಸಿದ್ದತೆ ಮಾಡಿಕೊಂಡಿದ್ದೇವೆ. ಧಾರವಾಡ ಜಿಲ್ಲೆಯಲ್ಲಿ ಒಟ್ಟು 733 ಬಸ್ಗಳಲ್ಲಿ ಮಹಿಳೆಯರು ಪ್ರಯಾಣ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಜಿಲ್ಲೆಯಲ್ಲಿ ದಿನವೊಂದಕ್ಕೆ ಸುಮಾರು 2.30 ಸಾವಿರ ಮಹಿಳೆಯರು ಪ್ರಯಾಣ ಮಾಡ್ತಾರೆ. ಸಹಜವಾಗಿ ಇಲಾಖೆಗೆ 50 ಲಕ್ಷ ಹೊರೆ ಆಗತ್ತೆ. ಇಲಾಖೆಗೆ 50 ಲಕ್ಷ ಹೊರೆ ಆದರೂ ಸರ್ಕಾರ ವೆಚ್ಚ ಭರಸತ್ತೆ ಎಂದು ಸಾರಿಗೆ ನಿಯಂತ್ರಣ ಅಧಿಕಾರಿ ಶಶಿಧರ ಚನ್ನಪ್ಪಗೌಡ ಹೇಳಿದ್ದಾರೆ.