ಬೆಂಗಳೂರು: ಎಲ್ಲರನ್ನು ಖುಷಿಯಾಗಿಡಲು, ಸಮಾಧಾನಪಡಿಸಿವುದು ಸಾಧ್ಯವಿಲ್ಲ ಅನ್ನೋ ಅರ್ಥದ ಮಾತೊಂದಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಿನ್ನೆಯಿಂದ ಉಚಿತ ಬಸ್ ಪ್ರಯಾಣದ ಯೋಜನೆ ಜಾರಿಗೊಳಿಸಿದ್ದು ರಾಜ್ಯದ ಮಹಿಳೆಯರಿಗೆಲ್ಲ ಸಂತಸ ತಂದಿದೆ. ನಮಗೆ ಲಭ್ಯವಾಗುತ್ತ್ತಿರುವ ವರದಿಗಳ ಪ್ರಕಾರ ಕೆಲ ಮಹಿಳೆಯರು ಯಾವ ಕೆಲಸವಿರದಿದ್ದರರೂ, ಉಚಿತ ಬಸ್ ಪಯಣದ ಖುಷಿ ಅನುಭವಿಸಲು ಬಸ್ ಹತ್ತ್ತುತ್ತಿದ್ದಾರೆ. ಆದರೆ, ಮತ್ತೊಂದೆಡೆ ಸರ್ಕಾರದ ಸ್ಕೀಮ್ ನಿಂದಾಗಿ ಖಾಸಗಿ ಬಸ್ ಮಾಲೀಕರು ಗೋಳಾಡುತ್ತಿದ್ದಾರೆ. ಟಿವಿ9 ಕನ್ನಡ ವಾಹಿನಿಯ ಬೆಂಗಳೂರು ವರದಿಗಾರ ಬೆಂಗಳೂರು-ಬಳ್ಳಾರಿ ನಡುವೆ ಚಳ್ಳಕೆರೆ ಮೂಲಕ ಸಂಚರಿಸುವ ಖಾಸಗಿ ಬಸ್ಸಿನ ನಿರ್ವಾಹಕ-ಮಾಲೀಕನನ್ನು ಮಾತಾಡಿಸಿದ್ದಾರೆ.
ಅವರು ಹೇಳುವ ಪ್ರಕಾರ ಸೋಮವಾರದಂದು ಅವರ ಬಸ್ಸಲ್ಲಿ ಕನಿಷ್ಟ 40 ಮಹಿಳೆಯರು ಇರುತ್ತಿದ್ದರಂತೆ ಆದರೆ ಇವತ್ತು ಒಬ್ಬೇಒಬ್ಬ ಮಹಿಳೆ ಇಲ್ಲ. ಸರ್ಕಾರ ಖಾಸಗಿ ಬಸ್ ಮಾಲೀಕರ ಬಗ್ಗೆಯೂ ಯೋಚಿಸಬೇಕು ಎಂದು ಅವರು ಹೇಳುತ್ತಾರೆ.