ಕೂಗು ನಿಮ್ಮದು ಧ್ವನಿ ನಮ್ಮದು

ಪದವೀಧರರಿಗೆ ಬೇಕಾಗಿರುವುದು ಉದ್ಯೋಗ, ಆರ್ಥಿಕ ನೆರವಲ್ಲಾ: ಮಂಜುನಾಥ ಅಚ್ಚಳ್ಳಿ

ಗದಗ: ಶುಕ್ರವಾರ ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿದ ೩,೦೩,೯೧೦ ಕೋಟಿ ಬಜೆಟನಲ್ಲಿ
ಪ್ರತಿ ಹಿಂದುಳಿದ ಜಿಲ್ಲೆಗಳಿಗೆ
ಕೈಗಾರಿಕಾ ಸ್ಥಾಪನೆ ಮಾಡಿ ನಿರುದ್ಯೋಗ ಪದವೀಧರ ಕೈಗೆ ಉದ್ಯೋಗ ನೀಡುವುದನ್ನು ಬಿಟ್ಟು ಸರ್ಕಾರ ಯುವ ಪೀಳಿಗೆಯನ್ನು ಸೊಂಬೆರಿಯನ್ನಾಗಿ ಮಾಡಲು ಹೋರಟಿದೆ ಎಂದು ನ್ಯೂ ಇಂಡಿಯನ ಸೋಷಿಯಲ್ ವೇಲ್ ಫೇರ್ ಆಂಡ್ಯ ಎಜುಕೇಶನ್ ಸೊಸೈಟಿ ಸಂಸ್ಥಾಪಕ ಅಧ್ಯಕ್ಷರಾದ ಮಂಜುನಾಥ ಅಚ್ಚಳ್ಳಿ ಹೇಳಿದರು.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು ಯುವ ಸ್ನೇಹಿ ಎಂಬ ಹೆಸರಲ್ಲಿ ಪದವಿ ಶಿಕ್ಷಣವನ್ನು ಮುಗಿಸಿ, ಮೂರು ವರ್ಷಗಳ ನಂತರವೂ ಯಾವುದೇ ಉದ್ಯೋಗ ದೊರೆಯದೆ ಇದ್ದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು
2,000 ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ ಸಿಎಂ ಪದವೀಧರಿಗೆ ಕೆಲಸ ನೀಡುತ್ತೇವೆ ಎಂಬ ಆತ್ಮವಿಶ್ವಾಸ ತುಂಬುವಲ್ಲಿ ವಿಫಲರಾಗಿದ್ದಾರೆ.

ಸರ್ಕಾರ ಘೋಷಿಸಿದ ಈ
ಆರ್ಥಿಕ ನೆರವಿನ ಬದಲು ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಿಕೊಳ್ಳದೆ ,ತಂತ್ರಜ್ಞಾನ ಬಳಸಿಕೊಂಡು ಜಿಲ್ಲೆಗೊಂದು ದೊಡ್ಡ ಮಟ್ಟದ ಕೈಗಾರಿಕೆಗಳನ್ನು ಸ್ಥಾಪಿಸಿ,ಯುವ ಪೀಳಿಗೆ ಸ್ವಂತ ಉದ್ಯಮದಲ್ಲಿ ಪ್ರಾರಂಭಿಸಿಲು ಅಗತ್ಯ ಆರ್ಥಿಕ ನೆರವು, ಪದವೀಧರರಿಗೆ ಉದ್ಯೋಗ ನೀಡುವಲ್ಲಿ 2023-24 ಬಜೆಟನಲ್ಲಿ ಕ್ರಮ ಕೈಗೊಳ್ಳ ಬೇಕಿತ್ತು. ಆದರೆ ಸರ್ಕಾರ ಒಂದು ಬಾರಿ ನಿರುದ್ಯೋಗ ಪದವೀಧರರಿಗೆ 2000 ನೀಡಿ ನೆರವಿನ ಹೆಸರಿನಲ್ಲಿ ಪದವಿ ಮುಗಿಸಿ ಉದ್ಯೋಗ ಮಾಡುವ ಯುವ ಪೀಳಿಗೆ ಕನಸಿಗೆ ತಣ್ಣೀರು ಎರಚಿದ್ದಾರೆ. ಸರ್ಕಾರ ಸಹಾಯಧನವನ್ನು ನೀಡುವುದು ಬಿಟ್ಟು ಉದ್ಯೋಗ ನೀಡುವಲ್ಲಿ ಕ್ರಮ ವಹಿಸಬೇಕು ಯುವಕರಿಗೆ ಆದ್ಯತೆ ನೀಡುತ್ತೇವೆ ಕೆಲಸ ನೀಡುತ್ತೇವೆ ಎಂದು ಕೇವಲ ಸಭೆ ಸಮಾರಂಭಗಳಲ್ಲಿ ಪ್ರಚಾರ ಮಾಡುತ್ತಾ ಈ ರೀತಿ ಸೊಂಬೆರಿ ಯೋಜನೆ ನೀಡುತ್ತಾ ಹೋದರೆ ನಿರುದ್ಯೋಗ ಹೋಗಲಾಡಿಸಲು ಹೇಗೆ ಸಾಧ್ಯ ಯಾವುದೇ ರೀತಿಯ ಉದ್ಯೋಗ ಸೃಷ್ಟಿ ಮಾಡುವ ಯೋಜನೆಯನ್ನು ಸರ್ಕಾರ ತರೆದೆ ಇರೋದು ವಿಪರ್ಯಾಸವೇ ಸರಿ ಇದನ್ನು ಬಿಟ್ಟು ಉದ್ಯೋಗ ನೀಡುವಲ್ಲಿ ಕ್ರಮ ವಹಿಸಬೇಕು.

error: Content is protected !!