ಕೂಗು ನಿಮ್ಮದು ಧ್ವನಿ ನಮ್ಮದು

ಹೆರಿಗೆಗಾಗಿ ಲಂಚ: ಆಶಾ ಕಾರ್ಯಕರ್ತೆಯಿಂದ ಸ್ಟ್ರಿಂಗ್ ಆಪರೇಷನ್

ಚಾಮರಾಜನಗರ: ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿ ಹೋಬಳಿ ಕೇಂದ್ರದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಆಸ್ಪತ್ರೆ ಸಿಬ್ಬಂದಿ ಹಣ ಪಡೆಯುತ್ತಿರುವ ದೃಶ್ಯವನ್ನು ಆಶಾ ಕಾರ್ಯಕರ್ತೆ ರಾಣಿ ಎಂಬುವರು ಸೆರೆ ಹಿಡಿಯುವ ಮೂಲಕ ಆರೋಗ್ಯ ಇಲಾಖೆಯ ಭ್ರಷ್ಟಾಚಾರವನ್ನು ಬಯಲು ಮಾಡಿದ್ದಾರೆ.

ಲಂಚಾವತಾರದ ವಿಡಿಯೋ

ಸಂತೆಮರಳ್ಳಿ ಸಮಯದಾಯ ಆರೋಗ್ಯ ಕೇಂದ್ರದಲ್ಲಿ ಒಂದೊಂದು ಚಿಕಿತ್ಸೆಗೆ ಇಲ್ಲಿ ಒಂದೊಂದು ರೇಟ್ ಫಿಕ್ಸ್ ಆಗಿದ್ದು
ನಾರ್ಮಲ್ ಡೆಲವರಿ ಆದ್ರೆ 3 ಸಾವಿರ, ಸೀಜೆರಿಯನ್ ಆದ್ರೆ 20 ಸಾವಿರ, ಸಂತಾನಹರಣ ಶಸ್ತ್ರ ಚಿಕಿತ್ಸೆಗೆ 3 ರಿಂದ 8 ಸಾವಿರ
ಗರ್ಭಕೋಶದ ಆಪರೇಷನ್ ಗೆ ಇಲ್ಲಿ 35 ಸಾವಿರ ಕೊಡಬೇಕಿದೆ ಎಂಬ ಅರೋಪ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ಸಂತೇಮರಳ್ಳಿ ಆಸ್ಪತ್ರೆಯ ಕರ್ಮಕಾಂಡದ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದ್ದು ಡಿಎಚ್ಒ‌ ಡಾ.ಚಿದಂಬರ ಆಸ್ಪತ್ರೆ ಸಿಬ್ಬಂದಿ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

error: Content is protected !!