ಮೈಸೂರು: ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಮತ ಎಣಿಕೆ ಬುಧವಾರದಿಂದ ನಡೆಯುತ್ತಿದೆ. ಮತ ಪೆಟ್ಟಿಗೆಯಲ್ಲಿ ಬ್ಯಾಲೆಟ್ ಪೇಪರ್ ಜೊತೆಗೆ ವಿಭಿನ್ನ ಕೋರಿಕೆಯ ಪತ್ರವನ್ನು ಮತದಾರರು ಹಾಕಿರುವ ಘಟನೆ ನಡೆದಿದೆ. ನಾನು ಎಂ.ಎ, ಬಿ.ಎಡ್ ಮಾಡಿದ್ದೇನೆ. ಆದರೆ ನನಗೆ ಕೆಲಸ ಇಲ್ಲ. ನಮ್ಮಪ್ಪನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಜಮೀನಿಗೆ ಕೊಳವೆ ಬಾವಿ ಅವಶ್ಯಕತೆ ಇದೆ. ನನಗೆ ಸರ್ಕಾರಿ ಕೆಲಸ ಕೊಡಿ, ಇಲ್ಲ ಅಂದ್ರೆ ಜಮೀನಿನಲ್ಲಿ ಕೊಳವೆಬಾವಿ ತೋಡಿಸಿಕೊಡಿ ಎಂದು ಯುವಕನೊಬ್ಬ ಪತ್ರ ಬರೆದು ಮತ ಪೆಟ್ಟಿಗೆಯಲ್ಲಿ ಹಾಕಿದ್ದಾನೆ.
ರಸಗೊಬ್ಬರ ಬೆಲೆ ಕಡಿಮೆ ಮಾಡಿ ಎಂದು ಪತ್ರ ಬರೆದು ಬ್ಯಾಲೆಟ್ ಪೇಪರ್ ಜೊತೆಗೆ ಮತದಾರ ತನ್ನ ಪತ್ರ ಹಾಕಿದ್ದಾನೆ. ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಗಣಿಗನೂರು ಗ್ರಾಮದ ರಾಜೇಂದ್ರ ಈ ಮನವಿ ಮಾಡಿದ್ದಾನೆ. ಬ್ಯಾಲೆಟ್ ಪತ್ರದ ಮೇಲೆಯೇ ಅಭ್ಯರ್ಥಿಗಳ ವಿರುದ್ಧ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಯಾವ ಅಭ್ಯರ್ಥಿಗಳು ಹಣ ಕೊಟ್ಟಿಲ್ಲ ಎಂದು ಬ್ಯಾಲೆಟ್ ಪೇಪರ್ ಮೇಲೆ ಮತದಾರ ಬರೆದಿದ್ದಾನೆ.