ಬೆಂಗಳೂರು: BMTC ಬಸ್ ಸಂಚಾರ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆಯೇ ಬೆಂಕಿ ಹತ್ತಿ ಉರಿದಿರುವ ಘಟನೆಯು ಬೆಂಗಳೂರಿನ ಚಾಮರಾಜಪೇಟೆಯ ಮಕ್ಕಳ ಕೂಟ ಬಳಿ ಸಂಭವಿಸಿದೆ. ಬಸ್ ಚಲಿಸುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಬಸ್ ನಲ್ಲಿ ನಾಲವತ್ತು ಜನ ಪ್ರಯಾಣಿಕರಿದ್ರು. ಆದ್ರೆ ಅದೃಷ್ಟವಶಾತ್ ಯಾರಿಗೂ ಯಾವುದೇ ಸಾವು ನೋವು ಸಂಭವಿಸಿಲ್ಲ.
ಕೂಡಲೆ ಪ್ರಯಾಣಿಕರನ್ನು ಬೇರೆ ಬಸ್ಗೆ ಶಿಫ್ಟ್ ಮಾಡಿ ಕಳಿಸಲಾಗಿದೆ. K.R ಮಾರ್ಕೆಟ್ಗೆ ಹೊರಟಿದ್ದ ಬಸ್ಗೆ ಬೆಂಕಿ ಹೊತ್ತಿಕೊಂಡಿದ್ದು, ಕಂಡೆಕ್ಟರ್ ಬಾಕ್ಸ್ನಲ್ಲಿ ಇಡಲಾಗಿದ್ದ ಬಸ್ ಟಿಕೆಟ್ ಸುಟ್ಟು ಭಸ್ಮವಾಗಿವೆ. ಡ್ರೈವರ್, ಕಂಡಕ್ಟರ್ ಬಸ್ಗೆ ಹತ್ತಿರುವ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದು. ಪೊಲೀಸರು ರಸ್ತೆ ಬಂದ್ ಮಾಡಿಸಿದ್ದಾರೆ. ಮಿನಿ ನೀರಿನ ಟ್ಯಾಂಕರ್ ಸಹಾಯದಿಂದ ಬೆಂಕಿ ನಂದಿಸಲಾಗುತ್ತಿದೆ.