ಕೂಗು ನಿಮ್ಮದು ಧ್ವನಿ ನಮ್ಮದು

ಒಡಿಶಾ ರೈಲು ದುರಂತ; ಗಾಯಾಳುಗಳಿಗಾಗಿ ಮಿಡಿದ ಹೃದಯಗಳು, ರಕ್ತ ನೀಡಲು ಮುಂದೆ ಬಂದ ಸಾಲು ಸಾಲು ಜನ

ಬಾಲಸೋರ್: ದೇಶದಲ್ಲಿ ನಡೆದ ಭೀಕರ ರೈಲು ಅಪಘಾತದಲ್ಲಿ ಒಡಿಶಾದ ಬಾಲಸೋರ್ನಲ್ಲಿ ನೆನ್ನೆ ನಡೆದ ರೈಲು ಅಪಘಾತವು ಒಂದು. ಈ ರೈಲು ದುರಂತದಲ್ಲಿ 233ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು. 900ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಿಗೆ ರಕ್ತದ ಅಗತ್ಯವಿದ್ದು, ಒಡಿಶಾ ಆಸ್ಪತ್ರೆಗಳಲ್ಲಿ ರಕ್ತ ನೀಡಲು ಜನ ಸಾಲು ಸಾಲು ನಿಂತಿದ್ದಾರೆ. ಶ್ರೇಷ್ಠ ದಾನಗಳಲ್ಲಿ ರಕ್ತದಾನವು ಒಂದು ಎಂಬ ಮಾತು ಇದೆ.

ಇದೀಗ ಈ ಕಾರ್ಯ ಮಾನವೀಯ ದೃಷ್ಟಿಗೆ ಸಾಕ್ಷಿಯಾಗಿದೆ, ಜಾತಿ, ಧರ್ಮದ ಭೇದವಿಲ್ಲದೆ, ಎಲ್ಲರೂ ಈ ಕಾರ್ಯದಲ್ಲಿ ತೋಡಗಿದ್ದಾರೆ. ಒಂದು ಕಡೆ ದುರಂತದಲ್ಲಿ ಸಿಲುಕಿರುವ ಪ್ರಯಾಣಿಕರನ್ನು ರಕ್ಷಣೆ ಮಾಡುವ ಕಾರ್ಯ ನಡೆಯುತ್ತಿದ್ದರೆ. ಇನ್ನೊಂದು ಕಡೆ ಗಾಯಗೊಂಡ ಜನರಿಗೆ ರಕ್ತ ನೀಡಿ ಜೀವ ಉಳಿಸುವ ಕಾರ್ಯ ನಡೆಯುತ್ತಿದೆ. ಮನುಷ್ಯ ಮನುಷ್ಯರ ನಡುವೆ ಇರುವ ಮಾನವೀಯತೆಗೆ ಸಾಕ್ಷಿಯಾಗಿದೆ. ಒಬ್ಬ ವ್ಯಕ್ತಿ ಕಷ್ಟದಲ್ಲಿರುವಾಗ ಆತನಿಗೆ ಸಾಹಯ ಮಾಡುವುದು ಮಾನವಕುಲದ ಧರ್ಮ ಎಂದು ನಮ್ಮ ಹಿರಿಯರು ಹೇಳಿರುವ ಮಾತಿಗೆ ಇದು ಉದಾಹರಣೆಯಾಗಿದೆ.

ಅಧಿಕಾರಿಗಳ ಪ್ರಕಾರ, ಈವರೆಗೆ 233 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 900 ಜನರು ಗಾಯಗೊಂಡಿದ್ದಾರೆ. ಈ ದುರಂತದ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರ ಶನಿವಾರ ಶೋಕಾಚರಣೆಯನ್ನು ಘೋಷಿಸಿದೆ. ಈ ಅಪಘಾತ ಸಂಭವಿಸಿದಾಗ ನಾನು ಹತ್ತಿರದಲ್ಲಿದ್ದೆ, ನಾವು ಸುಮಾರು 200-300 ಜನರನ್ನು ರಕ್ಷಿಸಿದ್ದೇವೆ ಎಂದು ಸ್ಥಳೀಯರಾದ ಗಣೇಶ್ ಸುದ್ದಿ ಸಂಸ್ಥೆ ANIಗೆ ಹೇಳಿದರು.

ನೆನ್ನೆ (ಜೂ.3) ರಾತ್ರಿಯಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಕೋಲ್ಕತ್ತಾದಿಂದ ಹೆಚ್ಚಿನ ಸೇನಾ ಸಿಬ್ಬಂದಿ ಬಂದಿದೆ ಎಂದು ಭಾರತೀಯ ಸೇನೆಯ ಕರ್ನಲ್ ಎಸ್‌ಕೆ ದತ್ತಾ ತಿಳಿಸಿದ್ದಾರೆ. ನಾವು ಕಳೆದ ರಾತ್ರಿಯಿಂದ ನಿರಂತರವಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದೇವೆ. ಕೋಲ್ಕತ್ತಾದಿಂದ (ಸೇನೆಯ) ಹೆಚ್ಚಿನ ಸೇನೆಗಳು ಬರುತ್ತಿವೆ ಎಂದು ಕರ್ನಲ್ ಎಸ್‌ಕೆ ದತ್ತಾ ಎಎನ್‌ಐಗೆ ತಿಳಿಸಿದ್ದಾರೆ.

ಒಟ್ಟು ಸುಮಾರು 200 ಆಂಬ್ಯುಲೆನ್ಸ್‌ಗಳು, 108 ಫ್ಲೀಟ್‌ಗಳಲ್ಲಿ 167 ಮತ್ತು 20 ಕ್ಕೂ ಹೆಚ್ಚು ಸರ್ಕಾರಿ ಆಂಬ್ಯುಲೆನ್ಸ್‌ಗಳು ಸೇರಿದಂತೆ 45 ಸಂಚಾರಿ ಆರೋಗ್ಯ ತಂಡಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇದರೊಂದಿಗೆ ಎಸ್‌ಸಿಬಿಯ 25 ವೈದ್ಯರ ತಂಡದೊಂದಿಗೆ 50 ಹೆಚ್ಚುವರಿ ವೈದ್ಯರನ್ನೂ ಇಲ್ಲಿ ನಿಯೋಜಿಸಲಾಗಿದೆ.

ಅಧಿಕಾರಿಗಳ ಪ್ರಕಾರ, ಮೃತದೇಹದ ವಿಲೇವಾರಿ ಮೇಲ್ವಿಚಾರಣೆಗಾಗಿ PRM MCH ಮತ್ತು SCB MCH ನಿಂದ ಸಜ್ಜುಗೊಂಡ ವಿಧಿವಿಜ್ಞಾನ ಔಷಧ ತಜ್ಞರು (FMT) ನಿಯೋಜಿಸಲಾಗಿದೆ. ಇದರ ಜತೆಗೆ ಆರೋಗ್ಯ ಸೇವೆಗಳ ನಿರ್ದೇಶಕರು, ರಕ್ತ ಸುರಕ್ಷತಾ ನಿರ್ದೇಶಕರು, ಹೆಚ್ಚುವರಿ DMET ಮತ್ತು ಇತರ ಮೂವರು ಹೆಚ್ಚುವರಿ ನಿರ್ದೇಶಕರನ್ನು ನಿಯೋಜನೆ ಮಾಡಲಾಗಿದೆ. ನಮ್ಮ 6 ತಂಡಗಳು ರಾತ್ರಿಯಿಂದ ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ನಮ್ಮ ಶ್ವಾನದಳ ಮತ್ತು ವೈದ್ಯಕೀಯ ತಂಡವು ಸಹ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ಎನ್‌ಡಿಆರ್‌ಎಫ್‌ನ ಹಿರಿಯ ಕಮಾಂಡೆಂಟ್ ಜಾಕೋಬ್ ಕಿಸ್ಪೊಟ್ಟಾ ತಿಳಿಸಿದ್ದಾರೆ.

error: Content is protected !!