ಕೂಗು ನಿಮ್ಮದು ಧ್ವನಿ ನಮ್ಮದು

ಕೃಷ್ಣಮೃಗ ಬೇಟೆಯಾಡಿ ಮಾಂಸ ಮಾರಾಟ: ಮೂವರ ಬಂಧನ

ಕೃಷ್ಣಮೃಗ ಕೊಂಡು ಮಾಂಸ ಮಾರಾಟ ಸಿಕ್ಕಿ ಬಿದ್ದ ಕಿರಾತಕರು

ಚಿಕ್ಕಬಳ್ಳಾಪುರ: ಕೃಷ್ಣಮೃಗವನ್ನ ಕೊಂದು ಅದರ ಮಾಂಸ ಮಾರಾಟ ಮಾಡಲು ಯತ್ನಿಸಿದ ಐದು ಜನರನ್ನು ಜೈಲಿಗಟ್ಟಿದ  ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕಿನ ಸೋಲಮಾಕಲಪಲ್ಲಿ ಗ್ರಾಮದಲ್ಲಿ ನಡೆದಿದೆ.

ಕೃಷ್ಣಮೃಗವನ್ನ ಕೊಂದ ಆರೋಪದಡಿ ಸೋಲಮಾಕಲಪಲ್ಲಿ ಗ್ರಾಮದ ಸಂದೇಶ್, ವೆಂಕಟೇಶ್ ಹಾಗೂ ಕೃಷ್ಣಪ್ಪ ಮತ್ತು ಯಲ್ಲಂಪಲ್ಲಿ ಚಂದ್ರಶೇಖರ್, ಪುಟ್ಟಪರ್ತಿ ನಾಗಪ್ಪ ಎಂಬುವರನ್ನ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಬಂಧಿತರಿಂದ 15ಕೆಜಿ 350 ಗ್ರಾಂ ನಷ್ಟು ಕೃಷ್ಣಮೃಗ ಮಾಂಸ, ಚರ್ಮ, ಒಂದು ಮಚ್ಚು, ಎರಡು ಚಾಕುಗಳು, ಐದು ಸಾವಿರದ ಏಳುನೂರು ರೂಪಾಯಿ ಹಣ ಸೇರಿದಂತೆ ಹಲವು ವಸ್ತುಗಳನ್ನ ವಶಪಡಿಸಿಕೊಂಡಿದ್ದಾರೆ. ಬಾಗೇಪಲ್ಲಿ ಅರಣ್ಯಾಧಿಕಾರಿ ಚಂದ್ರಶೇಖರ್ ರೆಡ್ಡಿ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

ಬಂಧಿತ 5 ಜನ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

error: Content is protected !!