ಕೂಗು ನಿಮ್ಮದು ಧ್ವನಿ ನಮ್ಮದು

ಹದಿನೇಳು ರಾಜ್ಯಗಳಲ್ಲಿ BJP, ಎರಡು ಕಡೆ ಕಾಂಗ್ರೆಸ್ ಯಾವ ರಾಜ್ಯದಲ್ಲಿ ಯಾರಿಗೆ ಅಧಿಕಾರ?

ನವದೆಹಲಿ: ಪಂಚರಾಜ್ಯ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಉತ್ತರ ಪ್ರದೇಶ, ಉತ್ತರಾಖಂಡ್, ಗೋವಾ, ಮಣಿಪುರದಲ್ಲಿ BJP ಗೆಲುವು ಸಾಧಿಸಿದೆ. ಈ ಮೂಲಕ ಒಟ್ಟಾರೆ BJP ಹಾಗೂ ಮೈತ್ರಿಕೂಟದೊಂದಿಗೆ ದೇಶದಲ್ಲಿ ಹದಿನೇಳು ರಾಜ್ಯಗಳಲ್ಲಿ ಅಧಿಕಾರವನ್ನು ಪಡೆದಿದೆ.

ಪಂಜಾಬ್‍ನಲ್ಲಿ ಆಮ್ ಆದ್ಮಿ ಪಕ್ಷ ಗೆಲುವು ಸಾಧಿಸಿದ್ದು, ಈ ಮೂಲಕ ಕಾಂಗ್ರೆಸ್ ಅಧಿಕಾರದಲ್ಲಿದ್ದ ಮತ್ತೊಂದು ರಾಜ್ಯವನ್ನು ಕಳೆದುಕೊಂಡಿದೆ.
ಅರುಣಾಚಲ ಪ್ರದೇಶ, ಅಸ್ಸಾಂ, ಗುಜರಾತ್, ಹರ್ಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಮಣಿಪುರ, ತ್ರಿಪುರ, ಉತ್ತರಪ್ರದೇಶ, ಉತ್ತರಾಖಂಡದಲ್ಲಿ ಸಂಪೂರ್ಣ ಅಧಿಕಾರದಲ್ಲಿದೆ

ಸಿಕ್ಕಿಂ, ಬಿಹಾರ, ಮಿಜೋರಾಂ, ನಾಗಾಲ್ಯಾಂಡ್, ಮೇಘಾಲಯ, ಗೋವಾದಲ್ಲಿ BJP ಮೈತ್ರಿ ಮಾಡಿಕೊಳ್ಳುವ ಮೂಲಕ ಅಧಿಕಾರದಲ್ಲಿದೆ. ಒಟ್ಟಾರೆ ಹದಿನೇಳು ರಾಜ್ಯಗಳಲ್ಲಿ BJP ತನ್ನ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ರಾಜಸ್ಥಾನ, ಛತ್ತೀಸ್‍ಗಢದಲ್ಲಿ ಪೂರ್ಣ ಅಧಿಕಾರದಲ್ಲಿದ್ದರೆ ಜಾರ್ಖಂಡ್, ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಮೈತ್ರಿ ಮಾಡಿಕೊಂಡಿದೆ. ಆಂಧ್ರ ಪ್ರದೇಶ, ಕೇರಳ, ಒಡಿಶಾ, ಪಂಜಾಬ್, ತೆಲಂಗಾಣ ಹಾಗೂ  ಪಶ್ಚಿಮ ಬಂಗಾಳ ಸೇರಿ ಒಟ್ಟು ಎಂಟು ರಾಜ್ಯಗಳಲ್ಲಿ ಅಧಿಕಾರವನ್ನು ಹೊಂದಿದೆ.

error: Content is protected !!