ಕೂಗು ನಿಮ್ಮದು ಧ್ವನಿ ನಮ್ಮದು

ಮೀಸಲಾತಿ ಹೆಸರಲ್ಲಿ ಮೇಯರ್ ಕನಸು ಕಂಡ ಬಿಜೆಪಿಗೆ ಮುಖಭಂಗ!

ಬೆಂಗಳೂರು: ಸುಮಾರು 1.6 ಕೋಟಿ ಜನಸಂಖ್ಯೆ ಹೊಂದಿರುವ ಸ್ಥಳೀಯ ಆಡಳಿತ ಸಂಸ್ಥೆ ಬಿಬಿಎಂಪಿ ಸದಸ್ಯರ ಆಡಳಿತಾವಧಿ ಪೂರ್ಣಗೊಂಡು ಎರಡುವರೆ ವರ್ಷಗಳಾಗಿದ್ದು, ಇದುವರೆಗೂ ಚುನಾವಣೆ ನಡೆಸೋ ಗೋಜಿಗೆ ಬಿಜೆಪಿ ಸರ್ಕಾರ ಹೋಗಿರ್ಲಿಲ್ಲ, ಇತ್ತ ವಾರ್ಡ್ ವಿಂಗಡಣೆ . ಮೀಸಲಾತಿ ಹೆಸರಲ್ಲಿ ಮುಂದಿನ ಬಾರಿ ಮೇಯರ್ ಗದ್ದುಗೆ ಏರ ಬೇಕು ಅಂತ ಪ್ಲಾನ್ ಮಾಡಿದ ಬಿಜೆಪಿಗೆ ಈಗ ಮುಖಭಂಗವಾಗಿದೆ,ಇತ್ತ ಹೊಸ ಸರ್ಕಾರ ಮೀಸಲಾತಿ ಬಗ್ಗೆ ಮರು ಪರಿಶೀಲನೆಗೆ ಸಮಿತಿ ರಚನೆ ಮಾಡಿ ಅದೇಶ ಹೊರಡಿಸಿದೆ.

ಕಳೆದ ಎರಡುವರೆ ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಬಿಬಿಎಂಪಿ ಚುನಾವಣೆಗೆ ಈಗ ಮರು ಜೀವ ಕೊಡೋದಕ್ಕೆ ಕಾಂಗ್ರೇಸ್ ಸರ್ಕಾರ ಪಣತೊಟ್ಟಿದೆ, ಕಳೆದ ಎರಡೂವರೆ ವರ್ಷದಿಂದ ಪಾಲಿಕೆ ಅವಧಿ ಮುಗಿದ್ರು ಚುನಾವಣೆ ನಡೆಸೋದಕ್ಕೆ ಹಿಂದು ಮುಂದು ನೋಡುತ್ತಿದ ಬಿಜೆಪಿ, ವಾರ್ಡ್ ವಿಂಗಡಣೆ ಹಾಗೂ ಮೀಸಲಾತಿ ಹೆಸರಲ್ಲಿ ಸಮಿತಿ ರಚನೆ ಮಾಡಿ ಬಿಬಿಎಂಪಿ ಚುನಾವಣೆಯನ್ನೂ ಮುಂದೂಡುತ್ತ ಬಂದಿತ್ತು, ಆದ್ರೆ ,,ಈಗ ಕಾಂಗ್ರೇಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದ್ರೆ ಪಾಲಿಕೆ ಚುನಾವಣೆ ನಡೆಸ್ತಿವಿ ಅಂತ ಹೇಳಿತ್ತು, ಈಗ ಅದರಂತೆ ಅಧಿಕಾರಕ್ಕೆ ಬಂದ ಒಂದು ವಾರದಲ್ಲೇ ಬಿಬಿಎಂಪಿ ಮೀಸಲಾತಿ ಪಟ್ಟಿ ತಯಾರು ಮಾಡೋದಕ್ಕೆ ಸಚಿವ ರಾಮಲಿಂಗರೆಡ್ಡಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ಜೂನ್ 30 ರೊಳಗೆ ವರದಿ ನೀಡುವಂತೆ ಸಿಎಂ ಸಿದ್ದರಾಮಯ್ಯ ಆದೇಶ ನೀಡಿದರೆ, ಇನ್ನೂ ಬಿಜೆಪಿ ಶಾಸಕರು ಮಾಡಿದ ಮೀಸಲಾತಿ ರದ್ದಾಗುವಂತಿದೆ.

ಇನ್ನೂ ಹೇಗಾದರೂ ಮಾಡಿ ಈ ಬಾರಿ ಪಾಲಿಕೆ ಗದ್ದುಗೆ ಏರಲ್ಲೇ ಬೇಕು ಅಂತ ಬೆಂಗಳೂರಿನ ಕೆಲ ಬಿಜೆಪಿ ಮಂತ್ರಿಗಳೂ ಹಾಗೂ ಶಾಸಕರು ವಾರ್ಡ್ ವಿಂಗಡನೇ ಹೆಸರಲ್ಲಿ ಚುನಾವಣೆ ಮುಂದೂಡುತ್ತ ಬಂದಿದ್ರು, ವಾರ್ಡ್ ವಿಂಗಡಣೆ ಮಾಡಿ , 198 ವಾರ್ಡಗಳನ್ನೂ 243 ವಾರ್ಡಗಳನ್ನಾಗಿ ಮಾಡಿದ್ರೆ ಬಿಜೆಪಿ ಪಕ್ಷ ಸುಲಭವಾಗಿ 150 ಜಯಗಳಿಸಿ ಪಾಲಿಕೆ ಮೇಯರ್ ಪಟ್ಟ ಅಲಂಕರಿಸ ಬಹುದು ಅಂತ ಬಿಜೆಪಿ ನಾಯಕರು ಪ್ಲಾನ್ ಮಾಡಿ , ತಮ್ಮಗೆ ಬೇಕಾದ ರೀತಿಯಲ್ಲಿ ವಾರ್ಡ್ ವಿಂಗಡಣೆ ಮಾಡಿ ಕೊಂಡಿದ್ರು, ಇನ್ನೂ ಜೆಡಿಎಸ್ ,ಕಾಂಗ್ರೇಸ್ ಪಕ್ಷ ಗೆಲೋ ಕಡೆ ವಾರ್ಡ್ ವಿಂಗಡಣೆ ಹೆಸರಲ್ಲಿ ವಾರ್ಡಗಳನ್ನೂ ಡಿವೈಡ್ ಮಾಡಿ, ತಮ್ಮ ಅಭ್ಯರ್ಥಿಗಳು ಕೇಳಿಸಿಕೋಳ್ಳೋ ಪ್ಲಾನ್ ಮಾಡಿದ್ರು. ಆದ್ರೆ ,ಹೊಸ ಸರ್ಕಾರ ಕಾಂಗ್ರೇಸ್ ಇದಕ್ಕೆ ಬ್ರೇಕ್ ಹಾಕಿ, ಹೊಸ ಮೀಸಲಾತಿ ಪಟ್ಟಿ ರಡಿ ಮಾಡುವಂತೆ ಸಮಿತಿ ರಚನೆ ಮಾಡಿದೆ.

ಇನ್ನೂ, 198 ವಾರ್ಡಗಳಿಂದ 243 ವಾರ್ಡಗಳನ್ನೂ ತಮ್ಮಗೆ ಬೇಕದ ರೀತಿಯಲ್ಲಿ ವಿಂಗಡನೆ ಹಾಗೂ ಮೀಸಲಾತಿ ಮಾಡಿ ಪಾಲಿಕೆ ಮೇಯರ್ ಸ್ಥಾನದ ಮೇಲೆ ಕಣ್ಣಿಟ್ಟಿದ ಬಿಜೆಪಿ 243 ವಾರ್ಡಗಳಲ್ಲಿ 150 ವಾರ್ಡಗಳ ಮೇಲೆ ಟಾರ್ಗೆಟ್ ಇಟ್ಟಿದ್ದ ಬಿಜೆಪಿ ನಗರ ಶಾಸಕರು ಸರ್ಕಾರ ಮೀಸಲಾತಿಯನ್ನೂ ಆರ್ ಎಸ್ ಎಸ್ ಕಛೇರಿಯಲ್ಲಿ ತಮ್ಮಗೆ ಬೇಕಾದ ರೀತಿಯಲ್ಲಿ ಮಾಡಿದರೆ ಎನ್ನುವ ಆರೋಪವನ್ನು ಕಾಂಗ್ರೆಸ್ ಮಾಡಿತ್ತು. ಇನ್ನೂ ,,ಕಾಂಗ್ರೇಸ್ ಪಕ್ಷ ಹೊಸ ಮೀಸಲಾತಿಯಿಂದ ಬಿಜೆಪಿಯ ಹಲವು ಮಾಜಿ ಕಾರ್ಫೋರೇಟರ್ ಗಳಿಗೆ ಕ್ಷೇತ್ರ ಕಳೆದುಕೊಳ್ಳುವ ಭಯ ಶುರುವಾಗಿದ್ದು, ಈಗಾಗ್ಲೇ ಕಾಂಗ್ರೇಸ್ ಪಕ್ಷದ ಕದ ತಟ್ಟುತ್ತಿರೋ ಬಿಜೆಪಿ ಕೆಲ ಪಾಲಿಕೆ ಮಾಜಿ ಸದಸ್ಯರು, ಪಕ್ಷ ಸೇರ್ಪಡೆಗೆ ಮಾಜಿ ಕಾರ್ಫೊರೇಟರ್ ಗಳು ಕಾಂಗ್ರೇಸ್ ಮುಖಂಡರ ಜೊತೆ ಚರ್ಚೆ ಮಾಡ್ತಿದ್ದಾರೆ ಅನ್ನೋ ಮಾತು ಕೂಡ ಕೇಳೀ ಬರ್ತಿದೆ.ಬಿಜೆಪಿ ಸರ್ಕಾರ ಮೇಯರ್ ಆಸೆಯ ಕನಸು ಈಗ ಭಗ್ನವಾಗಿದೆ. ಇತ್ತ ಹೊಸ ಸರ್ಕಾರ ಮೀಸಲಾತಿಯನ್ನೂ ತನ್ನ ಮೂಗಿನ ನೇರಕ್ಕೆ ಮಾಡಿಕೊಳ್ಳುವ ಎಲ್ಲಾ ಲಕ್ಷಣಗಳು ಕಾಣಿಸ್ತಿದೆ.

error: Content is protected !!