ಕೂಗು ನಿಮ್ಮದು ಧ್ವನಿ ನಮ್ಮದು

ಟಿಕೆಟ್ ನಿರೀಕ್ಷೆಯಲ್ಲಿದ್ದವರಿಗೆ ಆಘಾತ ! ಮಂಡ್ಯದಲ್ಲಿ ಮೂಲ ಬಿಜೆಪಿಗರಿಂದ ಬಂಡಾಯ ಸಾಧ್ಯತೆ

ಮಂಡ್ಯ : ಬಹು ನಿರೀಕ್ಷಿತ ಬಿಜೆಪಿಯ ಮೊದಲ ಪಟ್ಟಿ ನಿನ್ನೆ ಬಿಡುಗಡೆಯಾಗಿದೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ನಂತರ ಇದೀಗ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಟಿಕೆಟ್ ಆಕಾಂಕ್ಷಿತರಿಗೆ ಬಿಜೆಪಿ ದೊಡ್ಡ ಶಾಕ್ ನೀಡಿದೆ. ಮಂಡ್ಯ ಜಿಲ್ಲೆಯಲ್ಲಿ ಮೂಲ ಬಿಜೆಪಿಗರ ಬದಲಿದೆ ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ಇದು ಮೂಲ ಬಿಜೆಪಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಮಂಡ್ಯದಲ್ಲಿ ಮೂಲ ಹೊಸಬರಿಗೆ ಅವಕಾಶ ನೀಡಲಾಗಿದ್ದು, ಈ ಬಾರಿ ಬಿಜೆಪಿಯಿಂದ ಕಣಕ್ಕಿಳಿಸಲಾಗಿದೆ. ಇದರಿಂದ ಟಿಕೆಟ್ ನಿರೀಕ್ಷೆಯಲ್ಲಿದ್ದವರಿಗೆ ಆಘಾತ ಉಂಟಾಗಿದೆ. ಫೈಟರ್ ರವಿ, ನಂಜುಂಡೇಗೌಡ, ಚಂದಗಾಲು ಶಿವಣ್ಣ, ಲಕ್ಷ್ಮಿ ಅಶ್ವಿನ್ ಗೌಡಗೆ ಟಿಕೆಟ್ ನೀಡಿಲ್ಲ.

ಮೂಲ ಬಿಜೆಪಿಗರಿಂದ ಬಂಡಾಯ ಸಾಧ್ಯತೆ :
ನಾಗಮಂಗಲದಿಂದ ಟಿಕೆಟ್ ಸಿಗುವ ನೀರೀಕ್ಶೆಯಲ್ಲಿದ್ದ ಫೈಟರ್ ರವಿಯ ನೀರೀಕ್ಷೆ ಹುಸಿಯಾಗಿದೆ. ಇದರಿಂದಾಗಿ ಇದೀಗ ಫೈಟರ್ ರವಿ ಬಂಡಾಯ ಏಳುವ ಸಾಧ್ಯತೆ ಹೆಚ್ಚು ಎಂದೇ ಹೇಳಲಾಗುತ್ತಿದೆ. ಮತ್ತೊಂದೆಡೆ, ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಲಕ್ಷ್ಮಿ ಅಶ್ವಿನ್ ಗೌಡ ಕೂಡಾ ನಿರಾಸೆಯಾಗಿದೆ. ಇನ್ನು ಈ ಬಾರಿ ವಿಧಾನಸಭೆ ಪ್ರವೇಶಿಸುವ ಕನಸು ಕಂಡಿದ್ದ ಎಲ್. ಆರ್. ಶಿವರಾಮೇಗೌಡ ಆಸೆಗೂ ತಣ್ಣೀರೆರೆಚಿದೆ. ಶಿವರಾಮೇಗೌಡ ಬದಲಿಗೆ ಅವರ ಪತ್ನಿ ಸುಧಾ ಶಿವರಾಮ್ ಗೆ ಟಿಕೆಟ್ ನೀಡಲಾಗಿದ್ದು, ಶಿವರಾಮೇಗೌಡ ರಾಜಕೀಯ ಜೀವನಕ್ಕೆ ಬ್ರೇಕ್ ಹಾಕಲಾಗಿದೆ ಎಂದೇ ಹೇಳಬಹುದು.

ಮಂಡ್ಯದಿಂದ ಬಿಜೆಪಿಯಿಂದ ಕಣಕ್ಕಿಳಿಯುತ್ತಿರುವವರು :
ಮಂಡ್ಯ – ಅಶೋಕ್ ಜಯರಾಂ,
ಮದ್ದೂರು -ಎಸ್.ಪಿ.ಸ್ವಾಮಿ
ಮೇಲುಕೋಟೆ – ಡಾ.ಇಂದ್ರೇಶ್
ಶ್ರೀರಂಗಪಟ್ಟಣ – ಸಚ್ಚಿದಾನಂದ
ಮಳವಳ್ಳಿ – ಮುನಿರಾಜುಗೆ
ನಾಗಮಂಗಲ – ಸುಧಾ ಶಿವರಾಮ್
ಕೆ. ಆರ್ ಪೇಟೆ – ನಾರಾಯಣ ಗೌಡ

error: Content is protected !!