ಕೂಗು ನಿಮ್ಮದು ಧ್ವನಿ ನಮ್ಮದು

ಬಳ್ಳಾರಿ ವಿಜಯನಗರ ಬಿಜೆಪಿಯಲ್ಲಿ ದಿಢೀರ್ ಮಹಾ ಬದಲಾವಣೆ

ಬಳ್ಳಾರಿ: ವಿಜಯನಗರ ಬಿಜೆಪಿಯಲ್ಲಿ ದಿಢೀರ್ ಮಹಾ ಬದಲಾವಣೆಯಾಗಿದೆ. ಕೂಡ್ಲಿಗಿ ಶಾಸಕ ಎನ್ ವೈ ಗೋಪಾಲಕೃಷ್ಣ ರಾಜೀನಾಮೆ ಬೆನ್ನಲ್ಲೆಸಂಡೂರು ಕೂಡ್ಲಗಿ ಕ್ಷೇತ್ರಕ್ಕೆ ಯುವ ಮುಖಂಡರಿಗೆ ಮಣೆ ಹಾಕಲು ಚಿಂತನೆ ನಡೆಸಲಾಗುತ್ತಿದೆ. ಸಚಿವ ಅಶ್ವಥನಾರಾಯಣ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಪ್ತರೂ ಆಗಿರುವ ಕೂಡ್ಲಿಗಿ ಕ್ಷೇತ್ರದ ಟಿಕೇಟ್ ಆಕ್ಷಾಂಕಿ ಬಂಗಾರು ಹನುಮಂತಗೆ ಟಿಕೇಟ್ ಸಿಗುವ ಸಾಧ್ಯತೆ ಇದೆ.

ಇನ್ನು, ಸಂಡೂರು ಕ್ಷೇತ್ರದಿಂದ ಸ್ಪರ್ಧಿಸಲು ಸಚಿವ ಶ್ರೀರಾಮುಲು ನಕಾರ ಹಿನ್ನೆಲೆ ಈ ಕ್ಷೇತ್ರಕ್ಕೆ ಬಿಜೆಪಿ ಸಂಸದ ವೈ ದೇವೇಂದ್ರಪ್ಪ ಪುತ್ರ ವೈ ಡಿ ಅಣ್ಣಪ್ಪಗೆ ಬಿಜೆಪಿ ಟಿಕೇಟ್ ಸಾಧ್ಯತೆ ಇದೆ. ಜಾರಕಿಹೊಳಿ ಸಂಬಂಧಿಕ ಕುಟುಂಬವೂ ಇದಾಗಿದೆ. ಅಣ್ಣಪ್ಪ ಸ್ಪರ್ಧೆಗೆ ಒಲವು ತೋರಿರುವ ಸಂಡೂರು ಮುಖಂಡರು ಬೆಂಬಲ ವ್ಯಕ್ತವಾಗಿದ್ದಾರೆ. ಬಂಗಾರು ಪರವಾಗಿಯೂ ಸ್ಥಳೀಯ ಮುಖಂಡರು ಬ್ಯಾಟಿಂಗ್ ಮಾಡುತ್ತಿದ್ದಾರೆ.

error: Content is protected !!