ಕೂಗು ನಿಮ್ಮದು ಧ್ವನಿ ನಮ್ಮದು

ಕೊಳ್ಳೇಗಾಲ ನಗರಸಭೆ ಉಪಚುನಾವಣೆ ಫಲಿತಾಂಶ-7 ವಾರ್ಡ್ಗಳಲ್ಲಿ ಬಿಜೆಪಿ ಸಿಕ್ಸರ್!

ಚಾಮರಾಜನಗರ: ಕೊಳ್ಳೇಗಾಲ ನಗರಸಭೆ ಉಪ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಬೈಎಲೆಕ್ಷನ್ ನಡೆದಿದ್ದ 7 ವಾರ್ಡ್ಗಳ ಪೈಕಿ ಬಿಜೆಪಿ 6ರಲ್ಲಿ ಭರ್ಜರಿ ಜಯ ಸಾಧಿಸಿದೆ. ಒಂದು ವಾರ್ಡ್ನಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು ದಕ್ಕಿದೆ. ತನ್ಮೂಲಕ ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಅವರು ತಮ್ಮ ವರ್ಚಸ್ಸು ಉಳಿಸಿಕೊಂಡಿದ್ದಾರೆ. BSPಯಿಂದ ಉಚ್ಚಾಟನೆಗೊಂಡು ಬಿಜೆಪಿ ಸೇರಿದ್ದ ಎನ್. ಮಹೇಶ್ 7 ಕಾರ್ಪೊರೇಟರುಗಳ ಪೈಕಿ 6 ಜನರನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಹಿಂದೆ ನಗರಸಭೆ ಅಧ್ಯಕ್ಷ ಚುನಾವಣೆಯಲ್ಲಿ ವಿಪ್ ಉಲ್ಲಂಘನೆಯಾಗಿತ್ತು. ಬಿಎಸ್ಪಿಯ 7 ಸದಸ್ಯರು ವಿಪ್ ಉಲ್ಲಂಘಿಸಿ ಅನರ್ಹಗೊಂಡಿದ್ದರು. ಅನರ್ಹಗೊಂಡ ಸ್ಥಾನಗಳಿಗೆ ಉಪ ಚುನಾವಣೆ ನಡೆದಿತ್ತು. ಬಿಎಸ್ಪಿಯ ಆ ಏಳೂ ಸದಸ್ಯರು ಶಾಸಕ ಮಹೇಶ್ ಜತೆ ಗುರುತಿಸಿಕೊಂಡಿದ್ದರು. ಮುಂದೆ, ಅನರ್ಹಗೊಂಡಿದ್ದ 7 ಜನರಿಗೂ ಮಹೇಶ್ ಬಿಜೆಪಿ ಟಿಕೆಟ್ ಕೊಡಿಸಿದ್ದರು

error: Content is protected !!