ಕೂಗು ನಿಮ್ಮದು ಧ್ವನಿ ನಮ್ಮದು

ಅವ್ನು ನನ್ನೋನು ಏನಿವಾಗ.. ನನಗೆ ರಾಕೇಶ್ ಮೇಲೆ ಟ್ರೂ ಫೀಲಿಂಗ್ಸ್ ಇದೆ: ಸೋನು ಶ್ರೀನಿವಾಸ್ ಗೌಡ

ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಈ ಬಾರಿ ಓಟಿಟಿ ಪ್ಲಾಟ್ಫಾರ್ಮ್ನಲ್ಲಿ ಪ್ರಸಾರವಾಗುತ್ತಿದ್ದು, ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಬಿಗ್ಬಾಸ್ ಮನೆಗೆ ಕಾಲಿಟ್ಟಾಗಿನಿಂದ ಒಂದಲ್ಲಾ ಒಂದು ವಿಷಕ್ಕೆ ಹೆಚ್ಚು ಸುದ್ದಿಯಲ್ಲಿರುವ ಸೋಶಿಯಲ್ ಮೀಡಿಯಾ ಸ್ಟಾರ್ ಸೋನುಗೌಡ ರಾಕೇಶ್ ಮೇಲೆ ಟ್ರೂ ಫೀಲಿಂಗ್ಸ್ ಇದೆ, ಅವನು ನನ್ನವನು ಎಂದು ಹೇಳಿಕೊಂಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಲವ್ ಸ್ಟೋರಿಗಳು ಹುಟ್ಟಿಕೊಂಡಿವೆ. ಕೆಲವರು ಖ್ಯಾತಿ ಗಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ಪ್ರೀತಿ-ಪ್ರೇಮದ ಆಟ ಆಡಿದರೆ ಇನ್ನೂ ಕೆಲವರು, ನಿಜವಾಗಿ ಪ್ರೀತಿಸಿ ಮನೆಯಿಂದ ಹೊರಬಂದು ಮದುವೆ ಆಗಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದ ಸೋನು ಶ್ರೀನಿವಾಸ್ ಗೌಡ ರಾಕೇಶ್ ಮೇಲೆ ಲವ್ ಆಗಿರುವುದಾಗಿ, ಹಾಗೂ ಟ್ರೂ ಫೀಲಿಂಗ್ಸ್ ಇರುವುದಾಗಿ ಹೇಳಿದ್ದಾರೆ.

ಈ ಬಗ್ಗೆ ಸೋನು ಗೌಡ ತುಳು ನಟ ರೂಪೇಶ್ ಜೊತೆ ಹೇಳಿಕೊಂಡಿದ್ದು, ರಾಕೇಶ್ ನನ್ನೋನು ನನಗೆ ಅವನ ಮೇಲೆ ಟ್ರೂ ಫೀಲಿಂಗ್ಸ್ ಇದೆ. ಆದ್ರೆ ಅವನು ಕೊಬ್ಬು ತೋರಿಸುತ್ತಿದ್ದಾನೆ. ಎಲ್ಲಾ ಹುಡುಗಿಯರ ಜೊತೆ ಫ್ಲರ್ಟ್ ಮಾಡುತ್ತಾನೆ. ಅದು ನನಗೆ ಇಷ್ಟ ಇಲ್ಲ.. ಎನ್ನುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ರೂಪೇಶ್, ನೀನು ತಮಾಷೆ ಮಾಡ್ತಾ ಇದಿಯಾ ಎಂದು ಕೇಳುತ್ತಾರೆ. ಆಗ ಸೋನು ಇಷ್ಟು ಕ್ಯಾಮೆರಾ ಮುಂದೆ ಹೇಗೆ ಸುಳ್ಳು ಹೇಳಲಿ ನಾನು ನಿಜ ಹೇಳುತ್ತಿದ್ದೇನೆ ಎನ್ನುತ್ತಾರೆ
ನಂತರ ಇದೇ ವಿಚಾರವಾಗಿ ರಾಕೇಶ್ ಸೋನು ಸಂಭಾಷಣೆ ನಡೆಸಿದ್ದು, ಸೋನು ರಾಕೇಶ್ ನನಗೆ ನಿನ್ನ ಮೇಲೆ ಟ್ರೂ ಫೀಲಿಂಗ್ಸ್ ಇದೆ ಸುಳ್ಳಲ್ಲಾ ಎನ್ನುತ್ತಾರೆ. ಆಗ ರಾಕೇಶ್ ಹಾಗಿದ್ದರೆ ನಿನಗೆ ನಾನು ಹರ್ಟ್ ಮಾಡಲ್ಲ ಎಂದು ಹೇಳುತ್ತಾರೆ.

error: Content is protected !!