ಕೋಲಾರ: ಕೋಲಾರದಲ್ಲಿ ದೇಶದಲ್ಲೇ ಅತಿದೊಡ್ಡ ತ್ರಿವರ್ಣ ಧ್ವಜ ತಯಾರಾಗುತ್ತಿದ್ದು, ಇದು ಅಂತಿಮ ರೂಪ ಪಡಿದಿದೆ. ನಾಳೆ ಆಗಸ್ಟ್ ೧೫, 1.30 ಲಕ್ಷ ಚದರಡಿಯ ಬೃಹತ್ ಪ್ರಮಾಣದ ತ್ರಿವರ್ಣ ಧ್ವಜ ಅನಾವರಣ ಮಾಡಲಾಗುತ್ತಿದೆ. ಇದು 204 ಅಡಿ ಉದ್ದ 630 ಅಡಿ ಅಗಲದ ಬೃಹತ್ ಗಾತ್ರದ ತ್ರಿವರ್ಣ ಧ್ವಜವಾಗಿದೆ. ಇದು 13,000 ಮೀಟರ್ ಬಟ್ಟೆಯಲ್ಲಿ ಇದನ್ನು ತಯಾರಿಸಲಾಗಿದೆ.
7 ದಿನಗಳಲ್ಲಿ 25 ಜನರು ಸೇರಿ ಇದನ್ನು ರೆಡಿ ಮಾಡಿದ್ದಾರೆ. ಕೋಲಾರದ ಸಂಸದ ಮುನಿಸ್ವಾಮಿ ನೇತೃತ್ವದಲ್ಲಿ ಇದನ್ನು ತಯಾರಿಸಲಾಗಿದ್ದು, ಈಗ ಈ ಧ್ವಜವು ಅಂತಿಮ ರೂಪ ಪಡಿದಿದೆ. ಇದನ್ನು ಲಿಮ್ಕಾ ಬುಕ್ ಆಫ್ ರೆಕಾರ್ಡ್ಗೂ ಸೇರಲಾಗುತ್ತಿದೆ. ಕೈಯಿಂದ ನಿರ್ಮಾಣ ಮಾಡಲಾಗಿರುವ ರಾಷ್ಟ್ರ ಧ್ವಜ ಎಂಬ ಹೆಗ್ಗಳಿಕೆ ಕೂಡ ಇದಕ್ಕಿದೆ. ಕೋಲಾರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಈ ಬೃಹತ್ ಧ್ವಜವನ್ನು ನಾಳೆ ಹಾರಿಸಲು ಸಿದ್ಧತೆ ನಡೆದಿದ್ದು, ಈ ಧ್ವಜ ಹಿಡಿದುಕೊಳ್ಳಲು 2000 ಜನರನ್ನು ನೇಮಿಸಲಾಗಿದೆ.