ಕೂಗು ನಿಮ್ಮದು ಧ್ವನಿ ನಮ್ಮದು

ಹೆತ್ತ ಮಕ್ಕಳಿಗೆ ದೋಸೆ ಎತ್ತುವ ಮೊಗಚೆ ಕೈನಿಂದ ಬೆಂಕಿಯಲ್ಲಿ ಚಿತ್ರಹಿಂಸೆ ನೀಡುತ್ತಿದ್ದ ಪಾಪಿ ತಂದೆ ಅಂದರ್

ಬೆಂಗಳೂರು: ಮಕ್ಕಳು ಹಠ ಮಾಡುತ್ತಾರೆ ಎಂಬ 2ನೇ ಪತ್ನಿಯ ಮಾತು ಕೇಳಿ ಅಪ್ರಾಪ್ತ ಮೂರು ಮಕ್ಕಳ ಮೇಲೆ ಪಾಪಿ ತಂದೆ ಕ್ರೌರ್ಯ ಮೆರೆದ ಘಟನೆ ಬೆಂಗಳೂರಿನ ಜೆ.ಪಿ.ನಗರದಲ್ಲಿ ನಡೆದಿದೆ. ಸೆಲ್ವ ನೀಚ ಕೃತ್ಯ ಎಸಗಿದ ತಂದೆ.
ಆರೋಪಿ ಸೆಲ್ವ 2ನೇ ಪತ್ನಿ ಸತ್ಯಾ ಮಾತನ್ನು ಕೇಳಿ ಮಕ್ಕಳಿಗೆ ಚಿತ್ರಹಿಂಸೆ ನೀಡಿದ್ದಾನೆ. ಮಕ್ಕಳು ಹಠ ಮಾಡುತ್ತಾರೆಂದು 2ನೇ ಪತ್ನಿ ದೂರು ನೀಡಿದಕ್ಕೆ ದೋಸೆ ಎತ್ತುವ ಮೊಗಚೆ ಕೈನಿಂದ ಬೆಂಕಿಯಲ್ಲಿ ಸುಟ್ಟು ಮಕ್ಕಳಿಗೆ ಬರೆ ಎಳೆದಿದ್ದಾನೆ. ನೋವು ತಾಳಲಾರದೆ ಮನೆಯಿಂದ ಮಕ್ಕಳು ಓಡಿ ಬಂದಿದ್ದರಿಂದ ಮೂವರು ಮಕ್ಕಳ ನೆರವಿಗೆ ಸ್ಥಳೀಯ ನಿವಾಸಿಗಳು ಧಾವಿಸಿ ಬಂದು ಮಕ್ಕಳ ರಕ್ಷಣೆ ಮಾಡಿದ್ದಾರೆ. ಆರೋಪಿ ಸೆಲ್ವಾ ಕ್ರೂಸರ್ ಡ್ರೈವರ್ ಆಗಿದ್ದು ಮೂರು ತಿಂಗಳ ಹಿಂದಷ್ಟೇ ಸೆಲ್ವಾನ ಮೊದಲ ಪತ್ನಿ ಅಂಜಲಿ ಮೃತಪಟ್ಟಿದ್ದರು. ಬಳಿಕ ತನ್ನ ಮೊದಲ ಪತ್ನಿಯ ಮೂವರು ಮಕ್ಕಳನ್ನು ಎರಡನೇ ಪತ್ನಿ ಸತ್ಯಾ ಮನೆಗೆ ಕರೆದುಕೊಂಡು ಬಂದಿದ್ದ. ಸೆಲ್ವಾ ಕೆಲಸಕ್ಕೆ ಹೋಗಿ ಮನೆಗೆ ಬರುತ್ತಿದ್ದಂತೆ ಸತ್ಯಾ ಮಕ್ಕಳ ಮೇಲೆ ಗಂಡನಿಗೆ ಚಾಡಿ ಹೇಳುತ್ತಿದ್ದಳು. ಈ ರೀತಿ ಮಲತಾಯಿಯ ಮಾತು ಕೇಳಿ ಸೆಲ್ವಾ ಮಕ್ಕಳ ಮೇಲೆ ಹಲ್ಲೆ ಮಾಡುತ್ತಿದ್ದ. ಚಿತ್ರಹಿಂಸೆ ನೀಡುತ್ತಿದ್ದ. ಸ್ವಂತ ಮಕ್ಕಳು ಎನ್ನದೆ ಭುಜ, ಮೊಣಕೈ ಮತ್ತು ಪಾದಗಳಿಗೆ ಚಾಕುವಿನಿಂದ ಹಲ್ಲೆ ನಡೆಸಿದ್ದ. ದೋಸೆ ಎತ್ತುವ ಮೊಗಚೆ ಕೈನಿಂದ ಬರೆ ಎಳೆದಿದ್ದ. ನೋವನ್ನು ಸಹಿಸಲಾಗದೆ ಮಕ್ಕಳು ಕಿರುಚುತ್ತಾ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಈ ವೇಳೆ ಅಕ್ಕಪಕ್ಕದ ನೆರೆಮನೆಯವರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿ ಮಕ್ಕಳನ್ನು ರಕ್ಷಿಸಿದ್ದಾರೆ.
ಸದ್ಯ ಆರೋಪಿ ವಿರುದ್ಧ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ 307 ಕೊಲೆಯತ್ನ ಅಡಿಯಲ್ಲಿ ಎಫ್ಐಆರ್ ದಾಖಲಾಗಿದ್ದು ಪಾಪಿ ತಂದೆಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈಗಾಗಲೇ ಮಕ್ಕಳ ಹೇಳಿಕೆ ಪಡೆದಿರುವ ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂರು ಮಕ್ಕಳ ಪೈಕಿ ಇಬ್ಬರು ಮಕ್ಕಳಿಗೆ ಗಂಭೀರವಾಗಿ ಸುಟ್ಟ ಗಾಯಗಳಾಗಿವೆ. ಕಣ್ಣೀರು ಹಾಕುತ್ತ ತಂದೆ- ತಾಯಿ ಕಿರುಕುಳದ ಬಗ್ಗೆ ಮಕ್ಕಳು ಹೇಳಿಕೊಂಡಿವೆ. ಭಿಕ್ಷೆ ಬೇಡಲು ಕಳುಹಿಸುತ್ತೀನಿ ಎಂದು ಅಮ್ಮ ಹೇಳ್ತಿದ್ಳು. ಕಾರಣ ಹೇಳದೆ ಅಮ್ಮ ಹೊಡೀತಿದ್ದಳು. ಅಮ್ಮನ ಮಾತು ಕೇಳಿ ಅಪ್ಪಾನೂ ಹೊಡೀತಿದ್ರು. ನಮಗೆ ಮಲಗಲು ಜಾಗವನ್ನೂ ಕೊಡುತ್ತಿರಲಿಲ್ಲ. ಮಂಚದ ಕೆಳಗೆ ಬಾಕ್ಸ್ ಇತ್ತು. ನಾವು ಅದರಲ್ಲಿ ಮಲಗುತ್ತಿದ್ವಿ. ಪ್ರತೀ ದಿನ ಹೋಡೆಯುತ್ತಿದ್ರು, ಅಮ್ಮ ಜಾಸ್ತಿ ಹೊಡೆಯುತ್ತಾಳೆ ಎಂದು ಮಕ್ಕಳು ಕಣ್ಣೀರು ಹಾಕುತ್ತ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸದ್ಯ ಮಕ್ಕಳ ಹೇಳಿಕೆ ಬಳಿಕ ಸೆಲ್ವ-2ನೇ ಪತ್ನಿಯನ್ನೂ ಕೂಡ ಬಂಧಿಸಲಾಗಿದೆ. ಪಾಪಿ ಪೋಷಕರು ತಮ್ಮ ತಪ್ಪನ್ನ ಒಪ್ಪಿಕೊಂಡಿದ್ದಾರೆ. ಮಕ್ಕಳು ತಪ್ಪು ದಾರಿಯನ್ನ ಹಿಡಿದಿದ್ದರು. ಮನೆಯಲ್ಲಿ ಊಟ ಇದ್ದರೂ ಬೇರೆ ಮನೆಗೆ ಹೋಗಿ ಊಟ ಕೇಳ್ತಿದ್ರು. ತುಂಬಾ ಕೆಟ್ಟ ಮಾತು ಮಾತನಾಡ್ತಿದ್ರು. ಹೆಚ್ಚು ಹೊರಗಡೆ ಓಡಾಡ್ತಾ ಇದ್ರು. ಬುದ್ದಿ ಕಳಿಯಲಿ ಎಂದು ಹಲ್ಲೆ ಮಾಡಿದ್ದೀವಿ. ಮಕ್ಕಳದ್ದೇ ತಪ್ಪಿದ್ದರಿಂದ ಹಲ್ಲೆ ಮಾಡಿದ್ವಿ ಎಂದು ಸತ್ಯ ಪೊಲೀಸರಿಗೆ ತಿಳಿಸಿದ್ದಾರೆ.

error: Content is protected !!