ಕೂಗು ನಿಮ್ಮದು ಧ್ವನಿ ನಮ್ಮದು

ಗಾಂಜಾ ದಂಧೆ: ಪ್ರೇಯಸಿ ಲಾಕ್ ಆಗ್ತಿದಂತೆ ಪ್ರಿಯಕರ ಎಸ್ಕೇಪ್

ಬೆಂಗಳೂರು: ಪೋಷಕರನ್ನ ದೂರಮಾಡಿ ಪ್ರಿಯತಮನಿಗಾಗಿ ಗಾಂಜಾ ಮಾರಾಟಕ್ಕಿಳಿದ ಯುವತಿ ಸದ್ಯ ಪೊಲೀಸರ ಅತಿಥಿಯಾಗಿದ್ದಾಳೆ. ಶ್ರೀಕಾಕುಳಂನ ನಿವಾಸಿ ರೇಣುಕಾ(೨೫) ಬಂಧಿತ ಆರೋಪಿ ಆರೋಪಿ ರೇಣುಕಾ ಆಂಧ್ರ ಪ್ರದೇಶ ಮೂಲದವಳಾಗಿದ್ದು, ಕಡಪದ ಸಿದ್ದಾರ್ಥ್ ಎನ್ನುವಾತತನ್ನು ಪ್ರೀತಿಸುತ್ತಿದ್ದಳಂತೆ. ಚೆನೈನಲ್ಲಿ ಎಂಜಿನಿಯರಿಂಗ್ ಮಾಡುವಾಗ ಇವರಿಬ್ಬರ ಪ್ರೀತಿ ಆರಂಭವಾಗಿದ್ದು, ಐಷಾರಾಮಿ ಜೀವನಕ್ಕಾಗಿ ಗಾಂಜಾ ಸಪ್ಲೈ ಮಾಡುತ್ತಿದ್ದರು ಎನ್ನಲಾಗಿದೆ.

ರೇಣುಕಾ ಇದೇ ವಿಚಾರಕ್ಕೆ ಮನೆಯವರನ್ನು ತೊರೆದಿದ್ದು, ಸಿದ್ಧಾರ್ಥ ಮಾತು ಕೇಳಿ ಬಿಹಾರದ ಮೂಲದ ವ್ಯಕ್ತಿಯ ಜೊತೆ ಬೆಂಗಳೂರಿಗೆ ಗಾಂಜಾ ಮಾರಾಟ ಮಾಡಲು ಬಂದಿರುವುದಾಗಿ ಪೊಲೀಸರೆದುರು ತಪ್ಪೊಪ್ಪಿಕೊಂಡಿದ್ದಾಳೆ ಎನ್ನಲಾಗಿದೆ. ಸದ್ಯ ಸದಾಶಿವನಗರ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ಇತ್ತ ಪ್ರಿಯತಮೆ ಬಂಧನ ಸುದ್ದಿ ಕೇಳಿ ಪ್ರಿಯಕರ ಸಿದ್ದಾರ್ಥ್ ತಲೆಮರೆಸಿಕೊಂಡಿದ್ದಾನೆ.

error: Content is protected !!