ಬೆಳಗಾವಿ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಮುರುಗೋಡ ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ನಡೆದ ಬಹುದೊಡ್ಡ ದರೋಡೆ ಪ್ರಕರಣವನ್ನು ಭೇಧಿಸುವಲ್ಲಿ ಬೆಳಗಾವಿ ಜಿಲ್ಲಾ ಪೋಲೀಸರು ಯಶಸ್ವಿಯಾಗಿದ್ದಾರೆ. ಇತ್ತೀಚೆಗೆ ಮುರುಗೋಡ ಡಿಸಿಸಿ ಬ್ಯಾಂಕಿನಲ್ಲಿ ನಕಲಿ ಕೀ ಬಳಸಿ ಸುಮಾರು ನಾಲ್ಕು ಕೋಟಿಗೂ ಅಧಿಕ ನಗದು ಮತ್ತು ಬ್ಯಾಂಕಿನಲ್ಲಿ ಅಡವಿಟ್ಟ 1.5 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿದ ಘಟನೆ ಮಾರ್ಚ್ 6 ರಂದು ನಡೆದಿತ್ತು.
ಮುರಗೋಡ ಡಿಸಿಸಿ ಬ್ಯಾಂಕನಲ್ಲಿ 6 ಕೋಟಿ ಮೌಲ್ಯದ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ, ಎಎಸ್ಪಿ ಮಹಾನಿಂಗ ನಂದಗಾವಿ ನೇತೃತ್ವದಲ್ಲಿ ನಾಲ್ಕು ಪ್ರತ್ಯೇಕ ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆಗೆ ಇಳಿಸಿದ್ರು. ಎಸ್ಪಿ ಅವರ ಮಾರ್ಗದರ್ಶನದಲ್ಲಿ ಎಎಸ್ಪಿ ನೇತೃತ್ವದ ತಂಡ ಬ್ಯಾಂಕ್ ಕಳ್ಳರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ.
ಘಟನೆ ನಡೆದ ಒಂದೇ ವಾರದಲ್ಲಿ ಬ್ಯಾಂಕ್ ಕಳ್ಳರು ಅಂದರ್ ಆಗಿದ್ದಾರೆ. ಪ್ರಕರಣದಲ್ಲಿ ಡಿಸಿಸಿ ಬ್ಯಾಂಕ್ ಕ್ಲಾರ್ಕ್ ಸೇರಿ ಮೂವರು ಅರೇಸ್ಟ್ ಆಗಿದ್ದು, ಸುಳಿವು ಸಿಗದಂತೆ ಆರು ತಿಂಗಳಿನಿಂದ ಬ್ಯಾಂಕ್ ಲೂಟಿಗೆ ಖತರ್ನಾಕ್ ಕದಿಮರು ಪ್ಲಾನ್ ಮಾಡಿ ಬ್ಯಾಂಕ್ ಲೂಟಿ ಮಾಡಿದ್ದರು. ಮುರಗೋಡ ಡಿಸಿಸಿ ಬ್ಯಾಂಕ್ ಕ್ಲಾರ್ಕ್ ಬಸವರಾಜ ಹುಣಶಿಕಟ್ಟಿ, ಆತನ ಸ್ನೇಹಿತರಾದ ಸಂತೋಷ ಕಂಬಾರ, ಗಿರೀಶ ಬೆಳವಲ ಬಂಧಿತ ಆರೋಪಿಗಳಾಗಿದ್ದಾರೆ.
ಇನ್ನು ಬ್ಯಾಂಕ್ ಶೆಟರ್ ಹಿಡಿದು ಲಾಕರ್ ವರೆಗೂ ನಕಲಿ ಕೀ ಬಳಿಸಿ ಲೂಟಿ ಮಾಡಿದ್ದ ಚಾಲಾಕಿಗಳು, ಮಾರ್ಚ್ 5ರ ರಾತ್ರಿ ಬ್ಯಾಂಕ್ ಗೆ ಕನ್ನ ಹಾಕಿದ್ದರು. ಬ್ಯಾಂಕನಲ್ಲಿದ್ದ 4 ಕೋಟಿ 37 ಲಕ್ಷ 59 ಸಾವಿರ ಕ್ಯಾಶ್, 1 ಕೋಟಿ 63 ಲಕ್ಷ 72 ಸಾವಿರ ಮೌಲ್ಯದ 3 ಕೆಜಿ 148.504 ಗ್ರಾಂ ಬಂಗಾರವನ್ನ ಲೂಟಿ ಮಾಡಿದ್ರು. ಅಲ್ಲದೇ ಸಾಕ್ಷಿನಾಶ ಪಡಿಸುವ ಉದ್ದೇಶದಿಂದ ಬ್ಯಾಂಕ್ ನ ಸಿಸಿಟಿವಿ ಡಿವಿಆರ್ ಸಹ ಎಗರಿಸಿ ಚಾಲಾಕಿತನ ಮೇರೆದಿದ್ದ ಕದಿಮರಿಗೆ ಪೊಲೀಸರು ಬಿಗ್ ಶಾಕ್ ನೀಡಿದ್ದು, ಹಿಂಡಲಗಾ ಜೈಲಿನ ದಾರಿ ತೋರಿಸಿದ್ದಾರೆ.
ಬ್ಯಾಂಕ್ ಕಳ್ಳತನಕ್ಕೆ ನಕಲಿ ಕೀ ಬಳಸಿದ್ದರಿಂದ ಪೊಲೀಸರಿಗೆ ಬ್ಯಾಂಕ್ ಸಿಬ್ಬಂದಿ ಮೇಲೆಯೇ ಅನುಮಾನ ಮೂಡಿಸಿತ್ತು. ಹೀಗಾಗಿ ಪ್ರಕರಣದ ತೀವ್ರ ತನಿಖೆಯಲ್ಲಿ ಬ್ಯಾಂಕ್ ಕ್ಲಾರ್ಕ್ ಬಸವರಾಜ ಮೊಬೈಲ್ ನ ಕಾಲ್ ಡಿಟೈಲ್ಸ್ ಪೊಲೀಸರಿಗೆ ಸುಳಿವು ನೀಡಿತ್ತು. ಆರೋಪಿ ಬಸವರಾಜನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬಸವರಾಜ ಪೊಲೀಸರ ಎಲ್ಲಾ ಸತ್ಯವನ್ನು ಕಕ್ಕಿದ್ದಾನೆ.
ಅಷ್ಟೇ ಅಲ್ಲದೇ ಕಳ್ಳತನ ಮಾಡಿದ ತಕ್ಷಣವೇ ಆರೋಪಿಗಳು ಹಣವನ್ನು ಯರಗಟ್ಟಿ ಸಮೀಪದ ಹೋಲದಲ್ಲಿ ಬಚ್ಚಿಟ್ಟಿದ್ದರು. ಸದ್ಯ ಆರೋಪಿಗಳಿಂದ 4 ಕೋಟಿ 20 ಲಕ್ಷ 98 ಸಾವಿರ 400 ರೂಪಾಯಿ ನಗದು, 1 ಕೋಟಿ 63 ಲಕ್ಷ 72 ಸಾವಿರ ಮೌಲ್ಯದ 3 ಕೆಜಿ 149.26 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಿಸಿದ್ದ ಒಂದು ಕಾರು ಮತ್ತು ಒಂದು ಬೈಕ್ ಜಪ್ತಿ ಮಾಡಲಾಗಿದ್ದು, ಶೀಘ್ರವಾಗಿ ಪ್ರಕರಣವನ್ನು ಭೇದಿಸಿದ ಎಎಸ್ಪಿ ಮಹಾನಿಂಗ ನಂದಗಾವಿ ನೇತೃತ್ವದ ತನಿಖಾ ತಂಡವನ್ನು ಎಸ್ಪಿ ಲಕ್ಷ್ಮಣ ನಿಂಬರಗಿ ಶ್ಲಾಘಿಸಿದ್ದಾರೆ.