ಇತ್ತೀಚಿಗೆ ಮುತವಾಡ ಗ್ರಾಮದ ಹನುಮಂತ ದೇವರ ಗುಡಿ ಮತ್ತು ಮುಗಳಿಹಾಳ ಗ್ರಾಮದ ಶ್ರೀ ಲಕ್ಷ್ಮಿ ದೇವರ ಗುಡಿ ಕಳ್ಳತನ ಮಾಡಿದ ಇಬ್ಬರು ಆರೋಪಿತರಿಗೆ ಮುರಗೋಡ ಪೋಲಿಸರು ಬಂದಿಸಿ ಎರಡು ಪ್ರಕರಣಗಳನ್ನು ಬೇದಿಸಿ ಆರೋಪಿತರಿಂದ ಮುತವಾಡ ಗ್ರಾಮದ ಹನುಮಂತ ದೇವರ ಗುಡಿಯಲ್ಲಿ ಇಟ್ಟಿದ್ದ ದ್ಯಾಮವ್ವಾದೇವಿ ಮತ್ತು ದುರ್ಗಮ್ಮದೇವಿ ಮೂರ್ತಿಯ ಕೊರಳಲ್ಲಿಯ ತಲಾ ೨.೫ ಗ್ರಾಮ್ ತೂಕದ ಬಂಗಾರದ ತಾಳಿ ಎರಡು ಮತ್ತು ೨೫೦ ಗ್ರಾಮ್ ತೂಕದ ಬೆಳ್ಳಿಯ ದುರ್ಗಾದೇವಿ ಮುಖ ಒಂದು ಹಾಗೂ ಮುಗಳಿಹಾಳ ಗ್ರಾಮದ ಶ್ರೀ ಲಕ್ಷ್ಮೀ ದೇವಿಯ ಗುಡಿಯಲ್ಲಿಯ ೧.೪೦೦ ಗ್ರಾಂ ತೂಕದ ಬೆಳ್ಳಿಯ ಬೆತ್ತಗಳು ೨. ೧೦೦ ಗ್ರಾಂ ತೂಕದ ಬೆಳ್ಳಿಯ ಹಸ್ತಗಳು ೩. ೨ ಗ್ರಾಂ ತೂಕದ ಬಂಗಾರದ ತಾಳಿ ೪. ೨ ಗ್ರಾಂ ತೂಕದ ಬಂಗಾರದ ಮೂಗನತ್ ಒಂದು ಈ ಪ್ರಕಾರ ಒಟ್ಟು ೧,೩೦,೫೦೦ ರೂ ಕಿಮ್ಮತ್ತಿನ ಬಂಗಾರದ ಮತ್ತು ಬೆಳ್ಳಿಯ ಆಭರಣಗಳು ಹಾಗೂ ವಸ್ತುಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ.
ರಾಮನಗೌಡ ಪಟ್ಟಿ ಡಿ.ಎಸ್.ಪಿ ರಾಮದುರ್ಗು ಉಪ ವಿಭಾಗ ಇವರ ಮಾರ್ಗ ದರ್ಶನದಲ್ಲಿ ಮೌನೇಶ್ವರ ಮಾಲಿ ಪಾಟೀಲ, ಪೋಲೀಸ್ ಇನ್ಸ್ಪೆಕ್ಟರ್ ಮತ್ತು ಐ.ಎಮ್ ಹೀರೆಗೌಡರ, ಪಿ.ಎಸ್.ಐ ಮುರಗೋಡ ಪೋಲೀಸ್ ಠಾಣೆ ಇವರ ನೇತೃತ್ವದಲ್ಲಿ ಸಿಬ್ಬಂದಿ ಜನರಾದ ಕೆ.ಬಿ ಅಲಗರಾವುತ, ಆರ್.ಬಿ ಸಸಾಲಟ್ಟಿ ಬಿ.ಎಮ್ ಮಠದ, ಎಸ್.ಬಿ ಮಠದ, ಸುರೇಶ್ ಹುಂಬಿ ಮತ್ತು ವಿನೋದ ದೇಸಾಯಿಪಟ್ಟಿ ಇವರ ತಂಡ ಈ ೨ ಪ್ರಕರಣಗಳನ್ನು ಪತ್ತೆ ಮಾಡಿದ್ದು ಈ ತಂಡದಲ್ಲಿ ಇರುವ ಅಧಿಕಾರಿಗಳಿಗೆ ಹಾಗೂ ಎಲ್ಲ ಸಿಬ್ಬಂದಿ ಜನರಿಗೆ ಎಸ್.ಪಿ ಬೆಳಗಾವಿ ಜಿಲ್ಲೆಯವರು ಅವರ ಕಾರ್ಯ ವೈಖರಿ ಬಗ್ಗೆ ಪ್ರಶಂಸೆ ಮಾಡಿದ್ದಾರೆ.