ಬೆಳಗಾವಿ: ಮಹಾನಗರ ಪಾಲಿಕೆಯ 21ನೇ ಅವಧಿಗೆ ಮಹಾಪೌರ, ಉಪ ಮಹಾಪೌರ ಚುನಾವಣೆಯನ್ನು ದಿನಾಂಕ: 06-02-2023 ರಂದು ಬೆಳಗಾವಿ ಮಹಾನಗರ ಪಾಲಿಕೆಯ ಸಭಾಗೃಹದಲ್ಲಿ ನಡೆಸಲಾಗುವದು.
ಅಂದು ಮಹಾನಗರ ಪಾಲಿಕೆಯ ಕಾರ್ಯಾಲಯದಲ್ಲಿ ಚುನಾವಣೆ ಪ್ರಕ್ರಿಯೆ ಮುಂಜಾನೆ 10 ಗಂಟೆಗೆ ಪ್ರಾರಂಭವಾಗುವುದು.
ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರ, ಉಪಮಹಾಪೌರರ ಹುದ್ದೆಗಳಿಗೆ ದಿನಾಂಕ: 06-02-2023 ರಂದು ನಡೆಯುವ ಚುನಾವಣೆಯ ಪೂರ್ಣ ವೇಳಾಪಟ್ಟಿಯು ಈ ಕೆಳಗಿನಂತಿದೆ.
ಮುಂಜಾನೆ 10 ಗಂಟೆಯಿಂದ 1 ಗಂಟೆವರೆಗೆ ನಾಮಪತ್ರಗಳನ್ನು ಸ್ವೀಕರಿಸುವುದು
ಮಧ್ಯಾಹ್ನ 3 ಗಂಟೆಗೆ ಸಭೆ ಸೇರುವುದು. ಮಧ್ಯಾಹ್ನ 3 ರ ನಂತರ ನಾಮಪತ್ರಗಳ ಪರಿಶೀಲನೆ
ಕ್ರಮಬದ್ಧ ನಾಮನಿರ್ದೇಶನ, ಘೋಷಣೆ. ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವುದು.
ಉಮೇದುವಾರರ ಪಟ್ಟಿ ಘೋಷಣೆ.
ಅವಿರೋಧ ಆಯ್ಕೆಯಾದಲ್ಲಿ ಫಲಿತಾಂಶ ಘೋಷಣೆ.
ಚುನಾವಣೆ ಅಗತ್ಯವಿದ್ದಲ್ಲಿ ಕೈ ಎತ್ತುವ ಮೂಲಕ ಮತದಾನ
ನಡುವಳಿಕೆ ಪುಸ್ತಕದಲ್ಲಿ ಸದಸ್ಯರ ಸಹಿ ದಾಖಲಿಸುವುದು
ಮತಗಳ ಎಣಿಕೆ ಹಾಗೂ ಫಲಿತಾಂಶ ಘೋಷಣೆ.
ದಿನಾಂಕ 06-02-2023 ರಂದು ಚುನಾವಣೆಯ ದಿನ ಮಹಾನಗರ ಪಾಲಿಕೆ ಕಾರ್ಯಾಲಯದ ಮುಖ್ಯ ಪ್ರವೇಶ ದ್ವಾರದಲ್ಲಿ ಚುನಾಯಿತ ಸದಸ್ಯರುಗಳನ್ನು ಗುರುತಿಸಲು ಪಾಲಿಕೆಯ ಸಿಬ್ಬಂದಿಯವರನ್ನು ನಿಯೋಜಿಸಲಾಗಿದ್ದು, ಇದಕ್ಕಾಗಿ ಚುನಾಯಿತ ಸದಸ್ಯರುಗಳು ಕಡ್ಡಾಯವಾಗಿ ಗುರುತಿನ ಚೀಟಿ ತರಲು ಕೋರಿದೆ.
ಪಾಲಿಕೆಯ ಸದಸ್ಯರು ತಮ್ಮನ್ನು ಗುರುತಿಸಲು ಇರುವ ಅಧಿಕಾರಿ/ಸಿಬ್ಬಂದಿಗೆ ಸಹಕರಿಸಬೇಕು. ಚುನಾವಣೆ ಹಿನ್ನೆಲೆಯಲ್ಲಿ ಆ ದಿನದಂದು ಸಾರ್ವಜನಿಕರು ಕೂಡ ಸಹಕರಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಡಾ.ರುದ್ರೇಶ್ ಘಾಳಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.