ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಗೆ ಕೇಳಿದ್ದು ಒಂದು ಲಕ್ಷ ಕೋಟಿ 8 ಸಾವಿರ ಡೋಸ್ ಆದರೆ ಈಗ ವ್ಯಾಕ್ಸಿನ್ ಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಒಂದಡೆ ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಸಾರ್ವಜನಿಕರು ಮತ್ತು ಆಸ್ಪತ್ರೆ ಸಿಬ್ಬಂದಿ ಮಧ್ಯೆ ವ್ಯಾಕ್ಸಿನಗಾಗಿ ವಾಗ್ವಾದ ನಡೆದಿದೆ, ಬೆಳಿಗ್ಗೆ ಯಿಂದಲ್ಲೇ ಸರದಿ ಸಾಲಿನಲ್ಲಿ ನಿಂತಿದ್ದ ಜನರು ಆಕ್ರೋಶಗೊಂಡಿದ್ದಾರೆ.
ಇನ್ನು ಕೆಲವರಿಗೆ ಬರೀ ಎರಡನೇ ಡೋಸ್ ಲಸಿಕೆ ಮಾತ್ರ ಹೇಳಿದ ಸಿಬ್ಬಂದಿಗಳ ವಿರುದ್ಧ ಮೊದಲ ಡೋಸ್ ಪಡೆಯಲು ಬಂದ ಸಾರ್ವಜನಿಕರು ಗರಂ ಆಗಿದ್ದಾರೆ. ಇದರಿಂದ ಕೆಲ ಕಾಲ ಬೀಮ್ಸ್ ಆಸ್ಪತ್ರೆಯಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು, ಇನ್ನೊಂದಡೆ ವ್ಯಾಕ್ಸಿನ್ ಪಡೆಯಲು ಕೋವಿಡ್ ರೂಲ್ಸ್ ಮರೆತು ಸಾರ್ವಜನಿಕರು ಮುಗಿಬಿದ್ದಿದ್ದರು.