ಕೂಗು ನಿಮ್ಮದು ಧ್ವನಿ ನಮ್ಮದು

ಬೇಸಿಗೆಯಲ್ಲಿ ನಿಮ್ಮ ತ್ವಚೆ ಕಾಂತಿಯುತವಾಗಿರಲು ಈ ಟಿಪ್ಸ್ ಟ್ರಾಯ್ ಮಾಡಿ

ಬೇಸಿಗೆಯಲ್ಲಿ ತ್ವಚೆಗೆ ಕೆಮಿಕಲ್ ಇರುವ ಕ್ರೀಮ್ಗಳನ್ನು ಬಳಸುವ ಬದಲು ನೈಸರ್ಗಿಕ ವಿಧಾನಗಳಲ್ಲಿ ಈ ಟಿಪ್ಸ್ ಪಾಲಿಸಿದರೆ ಆರೋಗ್ಯ, ಸೌಂದರ್ಯ ನಿಮ್ಮದಾಗುತ್ತದೆ. ಬೇಸಿಗೆಯಲ್ಲಿ ಚರ್ಮದ ಆರೋಗ್ಯವನ್ನು ಹಾನಿಗೊಳಿಸುತ್ತದೆ. ಇದರಿಂದ ಕುತ್ತಿಗೆ, ಮುಖ, ತೋಳುಗಳು ಮತ್ತು ಕಾಲುಗಳು ಕಂದುಬಣ್ಣಕ್ಕೆ ತಿರುಗುತ್ತದೆ. ರಕ್ಷಣೆಗಾಗಿ ಕೆಮಿಕಲ್ ಇರುವ ಕ್ರೀಮ್ ಗಳನ್ನು ಬಳಸುವ ಬದಲು ನೈಸರ್ಗಿಕ ವಿಧಾನಗಳಲ್ಲಿ ಈ ಟಿಪ್ಸ್ ಪಾಲಿಸಿದರೆ ಆರೋಗ್ಯ, ಸೌಂದರ್ಯ ನಿಮ್ಮದಾಗುತ್ತದೆ.

ಎರಡು ಚಮಚ ಓಟ್ಸ್ಗೆ ಸಾಕಷ್ಟು ಹಾಲು ಸೇರಿಸಿ ಪೇಸ್ಟ್ ಮಾಡಿ. ಟೊಮೆಟೊ ಮತ್ತು ಕಿತ್ತಳೆ ತಿರುಳನ್ನು ತಲಾ ಒಂದು ಚಮಚ ಬೆರೆಸಿ ಪೇಸ್ಟ್ ತಯಾರಿಸಿ ಮೊದಲು ನಿಮ್ಮ ಮುಖವನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ. ಬಳಿಕ ಈ ಪೇಸ್ಟ್ನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿ ಸ್ವಲ್ಪ ಹೊತ್ತು ಒಣಗಲು ಬಿಡಿ ಒಂದೇ ಬಾರಿಗೆ ನೀರಿನಿಂದ ತೊಳೆಯುವ ಬದಲು, ನಿಮ್ಮ ಕೈಗಳನ್ನು ಸ್ವಲ್ಪ ಸ್ವಲ್ಪ ನೀರಿನಿಂದ ಒದ್ದೆ ಮಾಡಿ ಮತ್ತು ನಿಮ್ಮ ಮುಖ ಮತ್ತು ಕುತ್ತಿಗೆಯನ್ನು ಸ್ವಚ್ಛಗೊಳಿಸಿ.
ಟೊಮ್ಯಾಟೊ ಮತ್ತು ಕಿತ್ತಳೆಯಲ್ಲಿರುವ ಪೋಷಕಾಂಶಗಳು ಚರ್ಮದ ಮೇಲಿನ ಕಂದುಬಣ್ಣವನ್ನು ಮಸುಕಾಗಿಸಿದರೆ, ಹಾಲು ಹೊಳೆಯುವ ಮೈಬಣ್ಣವನ್ನು ನೀಡುತ್ತದೆ ಮತ್ತು ತ್ವೆಚೆಯನ್ನು ಹೊಳೆಯುವಂತೆ ಮಾಡುತ್ತದೆ.

error: Content is protected !!