ಕೂಗು ನಿಮ್ಮದು ಧ್ವನಿ ನಮ್ಮದು

ಪಿಗ್ಮೆಂಟೇಶನ್ ಸಮಸ್ಯೆ ನಿವಾರಣೆಗೆ ಈ ಮನೆಮದ್ದು ಪರಿಣಾಮಕಾರಿ!

ಪಿಗ್ಮೆಂಟೇಶನ್ ಸಮಸ್ಯೆ ಮುಖದ ಅಂದವನ್ನು ಮಂದಗೊಳಿಸುತ್ತದೆ. ಪಿಗ್ಮೆಂಟೇಶನ್ ಸಮಸ್ಯೆಯಿದ್ದಾಗ ಚರ್ಮದ ಬಣ್ಣವು ಸಾಮಾನ್ಯವಾಗಿ ಬದಲಾಗುತ್ತಾ ಹೋಗುತ್ತದೆ. ಅಷ್ಟೇ ಅಲ್ಲದೇ ತ್ವಚೆಯ ಚರ್ಮವು ಕೆಲವು ಭಾಗಗಳಲ್ಲಿ ಹೆಚ್ಚು ಗಾಢವಾಗುತ್ತಾ ಹೋಗುತ್ತದೆ. ಇನ್ನು ಕೆಲವು ಭಾಗಗಳಲ್ಲಿ ತ್ವಚೆಯ ಹೊಳಪು ಇರುತ್ತದೆ. ಈ ರೀತಿ ಪಿಗ್ಮೆಂಟೇಶನ್ ಸಮಸ್ಯೆ ಉಂಟಾಗಲು ಅನೇಕ ಕಾರಣಗಳಿವೆ. ಅವುಗಳಲ್ಲಿ ಸೂರ್ಯನ ಹಾನಿಕಾರಕ ಕಿರಣಗಳು ಮುಖ್ಯ ಕಾರಣವಾಗಿದೆ. ಇತ್ತ ದೇಹದಲ್ಲಾಗುವ ಹಾರ್ಮೋನ್ ಅಸಮೋತಲನ, ಹದಿಹರೆಯದ ಸಮಯ ಹಾಗೂ ತಿನ್ನುವ ಆಹಾರ ಇದೆಲ್ಲವೂ ಪಿಗ್ಮೆಂಟೇಶನ್ ಸಮಸ್ಯೆಗೆ ಕಾರಣವಾಗುತ್ತದೆ. ಅಲ್ಲದೇ ಇದು ಮೊಡವೆ ಉಂಟು ಮಾಡುತ್ತದೆ.

ಪಿಗ್ಮೆಂಟೇಶನ್ ಸಮಸ್ಯೆಗೆ ಪರಿಹಾರವೇನು?

ಇದೆಲ್ಲಾ ಸಮಸ್ಯೆಗಳಿಂದ ಚರ್ಮವು ತುಂಬಾ ಮಂದವಾಗಿ ಕಾಣುತ್ತದೆ. ಇದನ್ನು ತೊಡೆದು ಹಾಕಲು ಏನ್ ಮಾಡ್ಬೇಕು ಎಂಬುದು ಬಹುತೇಕರ ಯೋಚನೆ. ಹಾಗಾಗಿ ಪಿಗ್ಮೆಂಟೇಶನ್ ಸಮಸ್ಯೆ ಹೋಗಲಾಡಿಸಲು ತುಂಬಾ ಜನರು ಮಾರುಕಟ್ಟೆಯಲ್ಲಿ ಸಿಗುವ ಹಲವು ಉತ್ಪನ್ನಗಳನ್ನು ಅನ್ವಯಿಸುತ್ತಾರೆ.

ಆದರೆ ಇದು ಕೆಲವೊಮ್ಮೆ ಸಮಸ್ಯೆ ಹೋಗಲಾಡಿಸುವ ಬದಲು ಹೆಚ್ಚಿಸುತ್ತದೆ. ತ್ವಚೆಯ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಮನೆಮದ್ದುಗಳ ಸಹಾಯದಿಂದ ಹಾಗೂ ಯಾವುದೇ ಅಡ್ಡಪರಿಣಾಮವಿಲ್ಲದೇ ಈ ಸಮಸ್ಯೆ ಕಡಿಮೆ ಮಾಡಬಹುದು. ಅವುಗಳ ಬಗ್ಗೆ ಇಲ್ಲಿ ನೋಡೋಣ.

ಪಿಗ್ಮೆಂಟೇಶನ್ ಸಮಸ್ಯೆ ಉಂಟಾಗಲು ಕಾರಣಗಳು

ಮೆಲನಿನ್ ಅಧಿಕ ಉತ್ಪಾದನೆಯಾದಾಗ ಪಿಗ್ಮೆಂಟೇಶನ್ ಸಮಸ್ಯೆ ಉಂಟಾಗುತ್ತದೆ.

ನೇರ ಸೂರ್ಯನ ಬೆಳಕಿಗೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ ಪಿಗ್ಮೆಂಟೇಶನ್ ಸಮಸ್ಯೆ ಉಂಟಾಗುತ್ತದೆ..

ಮೊಡವೆ ಹಾಗೂ ಕಪ್ಪು ಕಲೆಗಳು ಪಿಗ್ಮೆಂಟೇಶನ್ ಕಾರಣ.

ಕೀಮೋಥೆರಪಿಯಿಂದಲೂ ಪಿಗ್ಮೆಂಟೇಶನ್ ಸಮಸ್ಯೆ ಉಂಟಾಗುತ್ತದೆ.

ಅನುವಂಶಿಕವಾಗಿಯೂ ಪಿಗ್ಮೆಂಟೇಶನ್ ಸಮಸ್ಯೆ ಕಂಡು ಬರುತ್ತದೆ.

ಗರ್ಭಾವಸ್ಥೆಯಲ್ಲಿ ಮತ್ತು ಋತುಬಂಧ, ಹಾರ್ಮೋನ್ ಅಸಮತೋಲನದಿಂದ ಪಿಗ್ಮೆಂಟೇಶನ್ ಸಮಸ್ಯೆ ಕಾಡುತ್ತದೆ.

ಪಿಗ್ಮೆಂಟೇಶನ್ ಸಮಸ್ಯೆಗೆ ಪರಿಹಾರ ನೀಡುವ ಮನೆಮದ್ದುಗಳು ಹೀಗಿವೆ

ಆಲೂಗಡ್ಡೆ ಮತ್ತು ನಿಂಬೆ ಫೇಸ್ ಮಾಸ್ಕ್

ಆಲೂಗಡ್ಡೆಯಲ್ಲಿರುವ ಕಿಣ್ವಗಳು ಪಿಗ್ಮೆಂಟೇಶನ್ ಕಲೆ ಕಡಿಮೆ ಮಾಡುತ್ತದೆ. ನಿಂಬೆ ಬ್ಲೀಚಿಂಗ್ ಗುಣ ಹೊಂದಿದೆ. ಚರ್ಮದ ಟೋನ್ ಅನ್ನು ಸಾಮಾನ್ಯವಾಗಿರಿಸುತ್ತದೆ. ತ್ವಚೆ ಹೊಳೆಯುವಂತೆ ಮಾಡುತ್ತದೆ.

ಆಲೂಗಡ್ಡೆ ತುರಿದು ಅದಕ್ಕೆ ನಿಂಬೆ ರಸ ಸೇರಿಸಿ. ತ್ವಚೆಯ ಮೇಲೆ ಚೆನ್ನಾಗಿ ಹಚ್ಚಿರಿ. 30 ನಿಮಿಷದ ನಂತರ ಉಗುರು ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿ. ಮೇಲೆ ನಿಯಮಿತವಾಗಿ ಅನ್ವಯಿಸಿ.

ಕೆಂಪು ಈರುಳ್ಳಿ

ಕೆಂಪು ಈರುಳ್ಳಿ ಚರ್ಮದ ಆರೈಕೆಗೆ ಮತ್ತು ಪಿಗ್ಮೆಂಟೇಶನ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈರುಳ್ಳಿಯ ಒಣಗಿದ ಚರ್ಮ ಮತ್ತು ಚರ್ಮದ ಮೇಲಿನ ಕಲೆ ತೆಗೆದು ಹಾಕುತ್ತದೆ. ಈರುಳ್ಳಿಯನ್ನು 4 ರಿಂದ 5 ಭಾಗಗಳಾಗಿ ಕತ್ತರಿಸಿ ಬಿಸಿ ನೀರಿನಲ್ಲಿ ನೆನೆಸಿ. ನಂತರ ರಸವನ್ನು ತೆಗೆದು, ಚರ್ಮದ ಪೀಡಿತ ಪ್ರದೇಶಗಳಿಗೆ ಅನ್ವಯಿಸಿ. 15 ನಿಮಿಷದ ನಂತರ ಸಾಮಾನ್ಯ ನೀರಿನಿಂದ ವಾರಕ್ಕೆ ಕನಿಷ್ಠ ಎರಡರಿಂದ ಮೂರು ಬಾರಿ ಅನ್ವಯಿಸಿ.

ಕಪ್ಪು ಚಹಾ ನೀರು

ಕಪ್ಪು ಚಹಾದ ನೀರಿನ ಬಳಕೆಯು ಚರ್ಮದ ಮೇಲಿನ ಕಪ್ಪು ಕಲೆ ಕಡಿಮೆ ಮಾಡುತ್ತದೆ. ನಿಯಮಿತ ಬಳಕೆ ಅತ್ಯಂತ ಪರಿಣಾಮಕಾರಿ. ಕುದಿಯುವ ನೀರಿಗೆ ತಾಜಾ ಕಪ್ಪು ಚಹಾ ಎಲೆ ಸೇರಿಸಿ. ಚೆನ್ನಾಗಿ ಕುದ್ದ ನಂತರ 2 ಗಂಟೆ ಬಿಡಿ.

ಅದು ತಣ್ಣಗಾದ ನಂತರ ಶೋಧಿಸಿ, ಕಪ್ಪು ಚಹಾದಲ್ಲಿ ಹತ್ತಿ ಚೆಂಡನ್ನು ನೆನೆಸಿ. ಮತ್ತು ಪೀಡಿತ ಪ್ರದೇಶಗಳಿಗೆ ಅನ್ವಯಿಸಿ. ದಿನಕ್ಕೆ ಎರಡು ಬಾರಿ ಅನ್ವಯಿಸಿ.

ಕೆಂಪು ಬೇಳೆ ಕಾಳು

ಕೆಂಪು ಬೇಳೆ ಕಾಳು ಫೇಸ್ ಪ್ಯಾಕ್ ಪಿಗ್ಮೆಂಟೇಶನ್ ಮತ್ತು ಕಪ್ಪು ಕಲೆಗಳ ಸಮಸ್ಯೆ ನಿವಾರಿಸುತ್ತದೆ. ಚರ್ಮದ ಒಟ್ಟಾರೆ ಆರೋಗ್ಯಕ್ಕೆ ಸಹಕಾರಿ. ಕೆಂಪು ಬೇಳೆ ಕಾಳು ಅನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ.

error: Content is protected !!