ಹುಬ್ಬಳ್ಳಿ: ನಾನು ಮೊದಲೇ ಹೇಳದಂತೆ ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಕ್ಕಿದೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಬರದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವೆ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ನಾನು ಮೊದಲೇ ಹೇಳಿದ್ದೇ ಯಾವುದೇ ಷಡ್ಯಂತ್ರ ಇಲ್ಲ, ಯಾರು ವಿರೋಧ ಮಾಡಿಲ್ಲ. ಆದ್ದರಿಂದ ಟಿಕೆಟ್ ನನಗೆ ಸಿಕ್ಕಿದೆ ಎಂದ ಅವರು ನನಗೆ ಟಿಕೆಟ್ ನೀಡಿದ ಕೇಂದ್ರದ ವರಿಷ್ಠರಾದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ರಾಜ್ಯದ ಪ್ರಮುಖರಿಗರ ಧನ್ಯವಾದಗಳನ್ನ ತಿಳಿಸುವೆ ಎಂದರು.
ಇನ್ನು ಅಲ್ಲಿನ ಸ್ಥಳೀಯ ನಾಯಕರನ್ನ ಸಹ ವಿಶ್ವಾಸಕ್ಕೆ ತೆಗೆದುಕೊಳ್ಳುವೆ ಎಂದ ಅವರು ನನ್ನ ಸಂಬಂಧಿಕರಾದ ಮಾಜಿ ಸಚಿವ ದಿವಂಗತ. ಸುರೇಶ ಅಂಗಡಿ, ಸಂಸದರಾದ ಮಂಗಳಾ ಅಂಗಡಿ ಸಾಕಷ್ಟು ಅಭಿವೃದ್ಧಿ ಪರ ಕಾರ್ಯ ಮಾಡಿದ್ದಾರೆ. ಅವರ ಕಾರ್ಯ ನನ್ನ ಗೆಲುವಿಗೆ ಶ್ರೀರಕ್ಷೇ ಆಗುತ್ತವೆ ಎಂದರು.
ಶೀಘ್ರವೇ ಬೆಳಗಾವಿಯಲ್ಲಿ ಮನೆ ಮಾಡಲು ನಮ್ಮ ಬೀಗರಿಗೆ ತಿಳಿಸಿದ್ದೇನೆ ಅಲ್ಲಿಯೇ ಮನೆ ಮಾಡಿ ಅಲ್ಲಿನ ಜನರ ವಿಶ್ವಾಸ ಗಳುವೆ ಎಂದರು.
ನಾಳೆ ಬೆಳಗಾವಿ ಹೋಗಬೇಕು ಅಂತಾ ಮಾಡಿದ್ದೇ ಸಭೆ ಮಾಡಬೇಕು ಅಂತಾ ಮಾಡಿದ್ದೇ ಆದರೆ ನಾಳೆ ಅಲ್ಲಿ ಹೋಳಿ ಹಬ್ಬ ಇರುವ ಕಾರಣ ಹೋಗಿಲ್ಲ. ನಾಡಿದ್ದು ಹೋಗಿ ಸಭೆ ಮಾಡುವೆ ಎಂದರು. ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್ ಕಿರಿಯ ವಯಸ್ಸಿನವರು ಅವರ ಮುಂದೆ ತಮ್ಮ ಅನುಭವ ಸಹ ಸಾಕಷ್ಟು ಅನುಕೂಲ ಆಗುತ್ತವೆ. ಸಣ್ಣವರು ದೊಡ್ಡವರು ಅಂತಾ ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎದುರಾಳಿ ಎದುರಾಳಿಯೇ ಎಂದರು.