ಕೂಗು ನಿಮ್ಮದು ಧ್ವನಿ ನಮ್ಮದು

ಮತ್ತೊಂದು ಹೊಸ ಬಾಂಬ್ ಸಿಡಿಸಿದ ಬಸವರಾಜ್ ಯತ್ನಾಳ್

ವಿಜಯಪುರ: ವಿಜಯಪುರದಲ್ಲಿ ಈ ಸಲ, ಜಿಲ್ಲೆಗೆ ಸಚಿವ ಸ್ಥಾನ ಕೋಡಬೇಕು. ಜೊತೆಗೆ ಈಗಾಗಲೇ ಎ A.S ಪಾಟೀಲ್ ನಡಹಳ್ಳಿ ನಿಗಮ ಮಂಡಳಿ ಅಧ್ಯಕ್ಷರಾಗಿದ್ದಾರೆ. ಜೊತೆಗೆ ಅವರು ಇವಾಗ ಕ್ಲೇಮ್ ಆಗುವುದಿಲ್ಲ. ಇನ್ನೂ ಇವಾಗ ಆಗಬೇಕಿರುವ ಸರದಿ ಶಾಸಕ ಸೋಮನಗೌಡ ಪಾಟೀಲ್ ಅವರದ್ದು, ಹೀಗೆಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ರು.

ಇನ್ನೂ ಗೌರವಿತವಾಗಿ ಜಿಲ್ಲೆಗೆ ಸಚಿವ ಸ್ಥಾನ ಕೊಡದೆ ಇದ್ರೆ, ಜೊತೆಗೆ ಜಿಲ್ಲೆಯನ್ನು ಕಡೆಗಣಿಸಿದ್ರೆ ಈ ಸಂಪುಟ ರಚನೆ ಮುಗಿದ ಬಳಿಕ ಬಹಳ ದೊಡ್ಡ ಶಾಕ್ ವಿಜಯಪುರ ಜಿಲ್ಲೆಯಿಂದ ಕೊಡಬೇಕಾಗತ್ತೆ ಎಂದು ಎಚ್ಚರಿಕೆಯನ್ನು ಸಹ ನೀಡಿದ್ದಾರೆ. ಅಲ್ಲದೆ ಒಂದೆ ವೇಳೆ ಈ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೆರಳಿನಂತೆ ಮುಂದುವರಿದರೆ ಕರ್ನಾಟಕದಲ್ಲಿ ಆ ನೆರಳನ್ನು ನಾಶ ಮಾಡುವಂತಹ ಕೆಲಸವನ್ನು ನಾನು ಮಾಡುತ್ತೇನೆ ಎಂದ್ದಿದಾರೆ.
ಇನ್ನೂ ಜಗದೀಶ್ ಶೆಟ್ಟರ್ ಅಸಮಾಧಾನ ವಿಚಾರವಾಗಿ ಮಾತನಾಡಿ, ಈ ಸ್ವಾಭಿಮಾನ, ನೈತಿಕತೆ ಎಂದರೆ ನನಗೆ ಎನು ಗೊತ್ತಿಲ್ಲ ಎಂದು ತಿಳಿಸಿದ್ದಾರೆ. ಜೊತೆಗೆ ಸ್ವಾಭಿಮಾನ, ನೈತಿಕತೆ, ಪ್ರಾಮಾಣಿಕತೆಯು ರಾಜಕಾರಣದಲ್ಲಿ ಉಳಿದಿದೆಯಾ ಎಂದ್ದಿದಾರೆ. ಮತ್ತು ನೈತಿಕತೆ, ಭ್ರಷ್ಟಾಚಾರ, ಸ್ವಾಭಿಮಾನವನ್ನು ಡಿಕ್ಷನರಿಯಲ್ಲಿ ಹುಡಕಬೇಕಾಯ್ತು ಎಂದು ಶೆಟ್ಟರ್ ಅಸಮಾಧಾನಕ್ಕೆ ವ್ಯಂಗ್ಯ ಮಾಡಿದರು.

ಇನ್ನೂ APS ಅಧಿಕಾರಿ ೨೭,೨೮ ವಯಸ್ಸಿನವರು ಇರುತ್ತಾರೆ. ಜೊತೆಗೆ PSI ೫೦ ವಯಸ್ಸಿನವರು ಇರುತ್ತಾರೆ. ಇನ್ನು ಹುದ್ದೆಗೆ ಇರುವುದು ಮಹತ್ವ, ವಯಸ್ಸಲ್ಲ ಎಂದ್ರು. ಜೊತೆಗೆ ಇಂತಹ ಕಾರಣಗಳನ್ನ ಹೇಳಬಾರದ್ರು. ಸಿಎಂ, ೨೫ ವರ್ಷದವನಾದ್ರು ಮುಖ್ಯಮಂತ್ರಿನೇ, ೧೦೫ ವರ್ಷದವನಾದ್ರು ಮುಖ್ಯಮಂತ್ರಿನೇ, ಇನ್ನೂ ೨೫ ವರ್ಷದವರು ಮುಖ್ಯಮಂತ್ರಿ ಆಗಿದ್ದಾರೆ. ಅನ್ನೋದಕ್ಕೆ ೫೦ ವರ್ಷದ ಮಂತ್ರಿ ಆಗೋದಿಲ್ಲ ಅನ್ನೋದು ಎಲ್ಲೂ ಇಲ್ಲ ಎಂದು ಶೆಟ್ಟರ್ ಕಾಲೆಳದ್ರು. ಇನ್ನೂ ಒಂದು ದೊಡ್ಡ ಹುದ್ದೆಗೆ ಹೋದ ಮೇಲೆ ಕೆಳಗಿನ ಹುದ್ದೆಗೆ ಬರಬಾರದು. ಜೊತೆಗೆ ಪ್ರಿನ್ಸಿಪಾಲ್ ಸೆಕ್ರೆಟರಿ ಆಫ್ ಕರ್ನಾಟಕ ಸರ್ಕಾರಿ ಆಗಿ, ವಿಜಯಪುರ ತಹಶೀಲ್ದಾರ್ ಆಗುತ್ತೇನೆ ಎಂದರೆ ಹೇಗೆ ಎಂದು ವ್ಯಂಗ್ಯ ಮಾಡಿದರು.

error: Content is protected !!