ಕೂಗು ನಿಮ್ಮದು ಧ್ವನಿ ನಮ್ಮದು

ಒಂದು ಸಾವಿರಕ್ಕೂ ಹೆಚ್ಚು ಮತಗಳು ಅಸಿಂಧು ಆಗಿವೆ, ಹೇಳಲು ನನಗೆ ನಾಚಿಕೆಯಾಗ್ತಿದೆ: ಹೊರಟ್ಟಿ

ಬೆಳಗಾವಿ: ಒಂದು ಸಾವಿರಕ್ಕೂ ಹೆಚ್ಚು ಮತಗಳು ಅಸಿಂಧು ಆಗಿದ್ದು, ಈ ಬಗ್ಗೆ ಹೇಳಲು ನನಗೆ ನಾಚಿಕೆಯಾಗುತ್ತಿದೆ ಎಂದು ಗೆಲುವಿನ ಬಳಿಕ ಬಸವರಾಜ್ ಹೊರಟ್ಟಿ ಅಸಮಾಧಾನ ಹೊರಹಾಕಿದ್ದಾರೆ. ಪಶ್ಚಿಮ ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಗೆಲುವು ಸಾಧಿಸಿ ದಾಖಲೆ ನಿರ್ಮಿಸಿದ ಬಳಿಕ ನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಹೊರಟ್ಟಿ ಅವರು, 7,070 ಮತಗಳನ್ನು ನಾನು ಪಡೆದುಕೊಂಡಿದ್ದೇನೆ. 9 ಸಾವಿರ ಮತಗಳು ಬರುತ್ತೆ ಅಂತಾ ಅಂದುಕೊಂಡಿದ್ದೆ. ಆದ್ರೆ ಇನ್ನೂ ಎರಡೂ ಸಾವಿರ ಮತಗಳು ಕಡಿಮೆ ಬಂದಿವೆ. ಒಂದು ಸಾವಿರಕ್ಕೂ ಹೆಚ್ಚಿನ ಮತಗಳು ಅಸಿಂಧು ಆಗಿವೆ. ಈ ಬಗ್ಗೆ ಹೇಳಲು ನನಗೆ ನಾಚಿಕೆಯಾಗುತ್ತಿದೆ ಎಂದು ಹೇಳಿದ್ದಾರೆ. 

ದೇಶದಲ್ಲೇ ಯಾರೂ 8 ಬಾರಿ ಗೆದ್ದಿಲ್ಲ, ದಾಖಲೆಯ ಗೆಲುವು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಹೊರಟ್ಟಿ ಅವರು, ಭಾರತ ದೇಶದಲ್ಲೇ ಯಾರು ಸಹ 8 ಭಾರಿ ಗೆದ್ದಿಲ್ಲ. ಆದ್ರೆ ನಾನು ಗೆದ್ದಿದ್ದೇನೆ, ನಾನು ದಾಖಲೆ ಮಾಡಿದ್ದೇನೆ. ರಾಜ್ಯದಲ್ಲಿ 2 ಸದನದಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ್ದೇನೆ. ಚುನಾವಣೆ ವೇಳೆ ನನ್ನ ಮೇಲೆ ಆರೋಪಗಳು ಕೇಳಿಬಂದಿವೆ. ಆದ್ರೆ ನಾನು ಯಾವಾಗಲೂ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

error: Content is protected !!