ಕರ್ನಾಟಕ ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದೆ. ಶಿವಮೊಗ್ಗ ಏರ್ಪೋರ್ಟ್ ಉದ್ಘಾಟನೆ ಒಂದು ಮೈಲಿಗಲ್ಲು ಎಂದು ಶಿವಮೊಗ್ಗದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಯಡಿಯೂರಪ್ಪನವರ ಪರಿಶ್ರಮದಿಂದ ಏರ್ಪೋರ್ಟ್ ಆಗಿದೆ. ಪ್ರಧಾನಿ ಮೋದಿ ಸರ್ಕಾರದಲ್ಲಿ ವಿಮಾನಯಾನ ಕ್ಷೇತ್ರ ಅಭಿವೃದ್ಧಿ ಆಗ್ತಿದೆ.
ಉಡಾನ್ ಯೋಜನೆಯಡಿ ವಿಮಾನ ನಿಲ್ದಾಣಗಳ ನಿರ್ಮಾಣ ಮಾಡಲಾಗಿದೆ. ಬಿಎಸ್ವೈ ಪರಿಶ್ರಮಕ್ಕೆ ಸಂದ ಫಲ ಇದು. ಮಲೆನಾಡಿನ ಆರ್ಥಿಕ & ಪ್ರವಾಸೋದ್ಯಮಕ್ಕೆ ಸಹಾಯವಾಗಲಿದೆ. ಯಡಿಯೂರಪ್ಪ ಹುಟ್ಟುಹಬ್ಬದ ದಿನವೇ ಏರ್ಪೋರ್ಟ್ ಉದ್ಘಾಟನೆಯಾಗುತ್ತಿದ್ದುಇದು ಅತ್ಯಂತ ವಿಶೇಷ ಹಾಗೂ ದೈವ ಇಚ್ಛೆ ಎಂದು ಬೊಮ್ಮಾಯಿ ಹೇಳಿದರು.