ಚಿಕ್ಕಮಗಳೂರು: ಕಡೂರು ತಾಲೂಕಿನಲ್ಲಿ ಬಿಜೆಪಿಯ ಜನಸಂಕಲ್ಪ ಸಮಾವೇಶ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕ ಬೆಳ್ಳಿ ಪ್ರಕಾಶ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗದೆ ಕೊಟ್ಟು ಅಭಿನಂದಿಸಿದರು. ಈ ವೇಳೆ ಗಧೆ ಬೆಳ್ಳಿ ಪ್ರಕಾಶ್ಗೆ ಚೆನ್ನಾಗಿ ಕಾಣುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಲಜೀವನ ಮಿಷನ್ ಯೋಜನೆಯಡಿ ಪ್ರತಿ ಮನೆಗೂ ನೀರಿನ ಸಂಪರ್ಕ ಕಲ್ಪಿಸಿದೆ. ಮನೆ ಮನೆಗೆ ನೀರು ಕೊಡುತ್ತೇವೆ ಅಂತಾ ಯಾವ ಪ್ರಧಾನಿಯಾದರೂ ಹೇಳಿದ್ದಾರಾ? ಈ ಹಿಂದೆ ಯಾವುದೇ ಸರ್ಕಾರ ಮಾಡದ ಧೈರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ತೋರಿದ್ದಾರೆ ಎಂದರು. ಆ ಮೂಲಕ ಸಿಎಂ ಬೊಮ್ಮಾಯಿ ಅವರು ಧೈರ್ಯ ಮತ್ತು ಧಮ್ ಬಗ್ಗೆ ಮತ್ತೊಮ್ಮೆ ಹೇಳಿಕೆ ನೀಡಿದರು.