ಕೂಗು ನಿಮ್ಮದು ಧ್ವನಿ ನಮ್ಮದು

ಇನ್ನೂ ಅನ್ ಲಾಕ್ ಆಗಿಲ್ಲ, ಪೊಲೀಸರು ಕ್ರಮ ಕೈಗೊಳ್ಳುವಂತೆ ಮಾಡಬೇಡಿ: ಗೃಹ ಸಚಿವ ಬಸವರಾಜ ಬೊಮ್ಮಾಯಿ

ಬೆಂಗಳೂರು: ಜೂನ್ 14ನೇ ತಾರೀಖಿನ ನಂತರ ಅನ್ ಲಾಕ್ ಪ್ರಕ್ರಿಯೆ ಆರಂಭವಾಗುತ್ತಿದ್ದರೂ ಇಂದಿನಿಂದಲೇ ಅನ್ ಲಾಕ್ ಆದಂತೆ ಜನರು ವರ್ತಿಸುವುದು ಸರಿಯಲ್ಲ, ಪೊಲೀಸರಿಗೆ ಸಹಕಾರ ನೀಡಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.ಮಾಧ್ಯಮ ಪ್ರತಿನಿಧಿಗಳೊಂದಿಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜನರು ಕೊರೋನಾ ತಡೆಗೆ ಸ್ವಯಂ ನಿಯಂತ್ರಣ ಮಾಡಬೇಕು, ಪೊಲೀಸರು ಕಾನೂನನ್ನು ಕೈಗೆತ್ತಿಕೊಳ್ಳುವ ಅವಕಾಶ ಬರಬಾರದು, ಪೊಲೀಸರು ಹಿಡೀತಿಲ್ಲ ಎಂದು ಕೇರ್ ಲೆಸ್ ಮಾಡಬೇಡಿ, ರಸ್ತೆಯಲ್ಲಿ ಪೊಲೀಸರು ತಡೆಯದಿದ್ದರೂ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗುವುದರಿಂದ ಕೇಸು ದಾಖಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಜೂನ್ 14ರಿಂಗ ಲಾಕ್ ಡೌನ್ ನಿಯಮಗಳನ್ನು ಪರಿಷ್ಕರಿಸಿ ಸರ್ಕಾರ ಹೊಸ ಮಾರ್ಗಸೂಚಿಯನ್ನು ನಿನ್ನೆ ಪ್ರಕಟಿಸಿದೆ. ಬೆಂಗಳೂರು ಸೇರಿದಂತೆ ಕೊರೋನಾ ಸಕ್ರಿಯ ಪ್ರಕರಣಗಳು ಕಡಿಮೆಯಿರುವ ಜಿಲ್ಲೆಗಳಲ್ಲಿ ಹಲವು ಸೇವೆಗಳಿಗೆ ರಿಯಾಯಿತಿ ನೀಡಲಾಗಿದೆ. ಅಗತ್ಯ ವಸ್ತುಗಳ ಸೇವೆ ವಹಿವಾಟಿಗೆ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ಇಂದು ಬೆಂಗಳೂರು ನಗರದಲ್ಲಿ ಜನರು ಅನ್ ಲಾಕ್ ಆದಂತೆ ವರ್ತಿಸುತ್ತಿದ್ದರು, ಬಹುತೇಕ ಕಡೆ 11 ಗಂಟೆಯಾದರೂ ಜನರು ರಸ್ತೆಗಳಲ್ಲಿ ಸಂಚರಿಸುತ್ತಲೇ ಇದ್ದರು, ಹಲವು ಕಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು.

error: Content is protected !!